ಬೆಳ್ತಂಗಡಿ – ಮನೆಗೆ ನುಗ್ಗಿದ ಕಾಳಿಂಗ ಸರ್ಪದ ರಕ್ಷಣೆ ವೇಳೆ ಅಟ್ಯಾಕ್

ಬೆಳ್ತಂಗಡಿ – ಮನೆಗೆ ನುಗ್ಗಿದ ಕಾಳಿಂಗ ಸರ್ಪದ ರಕ್ಷಣೆ ವೇಳೆ ಅಟ್ಯಾಕ್

ಜ. 20 ಬೆಳ್ತಂಗಡಿಯ ಕಕ್ಕಿಂಜೆಯ ಸೋಮಶೇಖರ್ ಎಂಬವರ ಮನೆಯ ಒಳಗೆ ನುಗ್ಗಿದ್ದ ಕಾಳಿಂಗ ಸರ್ಪವೊಂದನ್ನು ಉರಗ ಪ್ರೇಮಿ ಸ್ನೇಕ್ ಅನಿಲ್ ತಂಡದ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ.

ಸೋಮಶೇಖರ್ ಮನೆಗೆ ನುಗ್ಗಿದ್ದ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ಪ್ರೇಮಿ ಸ್ನೇಕ್ ಅನಿಲ್ ತಂಡ ಕಾರ್ಯಾಚರಣೆ ನಡೆಸಿ ಮನೆಯೊಳಗೆ ಅಡಗಿದ್ದ ಕಾಳಿಂಗ ಸರ್ಪ ರಕ್ಷಣೆ ಮಾಡಿದ್ದಾರೆ.

ರಕ್ಷಣಾ ಕಾರ್ಯಚರಣೆ ವೇಳೆ ರಕ್ಷಿಸಲು ಬಂದವರ ಮೇಲೆಯೇ ಕಾಳಿಂಗ ಸರ್ಪ ಅಟ್ಯಾಕ್ ಮಾಡಲು ಬಂದಿದೆ. ಬಳಿಕ ಹರ ಸಾಹಸದಿಂದ ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅನಿಲ್.

ರಾಜ್ಯ