ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿ ಆರ್ ಕೆ ಬ್ಯಾಂಗಲ್ಸ್  ಅಂಗಡಿಯ ಗೋಡಾನ್ ಗೆ ಆಕಸ್ಮಿಕ ಬೆಂಕಿ : ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿಯ ಬಳೆ ಮತ್ತು ಫ್ಯಾನ್ಸಿ ವಸ್ತುಗಳು

ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿ ಆರ್ ಕೆ ಬ್ಯಾಂಗಲ್ಸ್ ಅಂಗಡಿಯ ಗೋಡಾನ್ ಗೆ ಆಕಸ್ಮಿಕ ಬೆಂಕಿ : ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿಯ ಬಳೆ ಮತ್ತು ಫ್ಯಾನ್ಸಿ ವಸ್ತುಗಳು

ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಡಿ ಎಂ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಆರ್ ಕೆ ಬ್ಯಾಂಗಲ್ ಅಂಗಡಿಯ ಗೋಡಾನಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಳೆ ಮತ್ತು ಫ್ಯಾನ್ಸಿ ಐಟಂಗಳು ಸುಟ್ಟು ಕರಕಲಾದ ಘಟನೆ ಇದೀಗ ಸಂಭವಿಸಿದೆ.

ಗೋಡನಿಂದ ಹೊಗೆ ಬರುತ್ತಿದ್ದ ಸಂದರ್ಭ ಇದನ್ನು ನೋಡಿದ ಅಂಗಡಿ ಮಾಲಕರು ಬೊಬ್ಬೆ ಹಾಕಿ ಪಕ್ಕದ ಅಂಗಡಿಯವರಲ್ಲಿ ಬೆಂಕಿ ಬಿದ್ದಿರುವ ಘಟನೆಯನ್ನು ಹೇಳಿದ್ದಾರೆ.

ಕೂಡಲೇ ಸ್ಥಳಕ್ಕೆ ಓಡಿಬಂದ ಸ್ಥಳೀಯ ಅಂಗಡಿಯ ಮಾಲಕರುಗಳು ನೀರು ಹಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆದರೆ ಅಷ್ಟೊತ್ತಿಗಾಗಲೇ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳು ಕರಗಳಾಗಿದ್ದವು.

ಬೆಂಕಿ ನಂದಿಸುವಲ್ಲಿ ಸ್ಥಳೀಯರಾದ ದಿನೇಶ್, ಹರಿಪ್ರಸಾದ್, ಪುನೀತ್, ಖಾಲಿದ್, ಶಾಫಿ,ಹಾರಿಸ್,ಯು ಪಿ ಬಶೀರ್ ಶೂ ಬಿಝ್ ಮೊದಲಾದವರು ಸಹಕರಿಸಿದರು.ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ್ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡಿದರು.

ರಾಜ್ಯ