ಇನ್ಮುಂದೆ ಆಧಾರ್‌ ಜನ್ಮ ದಿನಾಂಕಕ್ಕೆ ಪುರಾವೆಯಾಗಲ್ಲ

ಇನ್ಮುಂದೆ ಆಧಾರ್‌ ಜನ್ಮ ದಿನಾಂಕಕ್ಕೆ ಪುರಾವೆಯಾಗಲ್ಲ

ಹೊಸದಿಲ್ಲಿ: ಜನನ ದಿನಾಂಕದ ದಾಖಲೆಯಾಗಿ ಇನ್ನು ಮುಂದೆ ಆಧಾರ್‌ ಕಾರ್ಡ್‌ ಅನ್ನು ಪರಿಗಣಿಸಲಾಗುವುದಿಲ್ಲ ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸ್ಪಷ್ಟಪಡಿಸಿದೆ.

ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ(ಯುಐಡಿಐಎ)ದ ನಿರ್ದೇಶನದ ಅನ್ವಯ ಈ ನಿರ್ಧಾರ ಕೈಗೊಂಡಿರುವುದಾಗಿ ಇಪಿಎಫ್ಒ ತಿಳಿಸಿದೆ. ಜತೆಗೆ, ಜನನ ದಿನಾಂಕದ ತಿದ್ದುಪಡಿಗೆ ಸ್ವೀಕಾರಾರ್ಹವಾದ ದಾಖಲೆಗಳ (ಪ್ರೂಫ್) ಪಟ್ಟಿಯಿಂದ ಆಧಾರ್‌ ಕಾರ್ಡ್‌ ಅನ್ನು ತೆಗೆದುಹಾಕಲಾಗಿದೆ.

ಆಧಾರ್‌ ಸಂಖ್ಯೆಯನ್ನು ಒಬ್ಬ ವ್ಯಕ್ತಿಯ ಗುರುತನ್ನು ದೃಢಪಡಿಸುವ ಉದ್ದೇಶದಿಂದ ನೀಡಲಾಗಿದೆಯೇ ವಿನಾಹಃ ಅದು ಆತನ ಜನನ ದಿನಾಂಕಕ್ಕೆ ಪುರಾವೆಯಾಗಲ್ಲ ಎಂದು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಯುಐಡಿಐಎ ಸುತ್ತೋಲೆ ಹೊರಡಿಸಿತ್ತು.

ರಾಜ್ಯ