ಮಂಗಳೂರು: ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದಾಗ ದಂಪತಿಗೆ ಅಪಘಾತ- ಪತಿ ಗಂಭೀರ

ಮಂಗಳೂರು: ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದಾಗ ದಂಪತಿಗೆ ಅಪಘಾತ- ಪತಿ ಗಂಭೀರ

ಮಂಗಳೂರು : ಮರೋಳಿಯಲ್ಲಿ ಬಳಿ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಂಪತಿ ಸ್ಕೂಟರ್‌ನಲ್ಲಿ ಹಿಂದಿರುಗುತ್ತಿದ್ದಾಗ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದ ಘಟನೆ ನಡೆದಿದೆ.

ಗಾಯಗೊಂಡವರನ್ನು ಬಜ್ಜಿ ಅದ್ಯಪಾಡಿ ನಿವಾಸಿ ಹನೀಫ್ ಮತ್ತು ಅವರ ಪತ್ನಿ ರಮ್ಲತ್‌ ಎಂದು ತಿಳಿದು ಬಂದಿದೆ.

ಸ್ಕೂಟರ್ ಸವಾರ ಮುಹಮ್ಮದ್ ಹನೀಫ್ (45) ಗಂಭೀರ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ. ಇಬ್ಬರನ್ನೂ ನಗರದ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬಜ್ಪೆ ಸಮೀಪದ ಆದ್ಯಪಾಡಿಯ ಮುಹಮ್ಮದ್ ಹನೀಫ್ ತುಂಬೆಯಿಂದ ನಂತೂರು ಕಡೆಗೆ ಪತ್ನಿ ರಮ್ಲತ್ ಜೊತೆಗೆ ಬರುತ್ತಿದ್ದಾಗ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇದರಿಂದ ಸ್ಕೂಟರ್ ಮುಂದಿನಿಂದ ಚಲಿಸುತ್ತಿದ್ದ ಇನ್ನೊಂದು ಕಾರಿಗೂ ಬಡಿದಿದೆ ಎನ್ನುವ ಮಾಹಿತಿ ಇದೆ.ತುಂಬೆಯಲ್ಲಿ ನಡೆದ ತನ್ನ ಅಣ್ಣನ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪತ್ನಿಯ ಜೊತೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕದ್ರಿ ಸಂಚಾರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ರಾಜ್ಯ