
ಇಂದು ಬೆಳಿಗ್ಗೆ ಮಡಿಕೇರಿ ತಾಲೂಕಿನ ನೆಲಜಿ ಮತ್ತು ಕುಂಜಿಲ ಗ್ರಾಮದ ಗಡಿಯಲ್ಲಿರುವ ಅಚ್ಚಾಂಡಿರ ಹಾಗೂ ಕಲಿಯಾಟಂಡ ತೋಟದ ಮಧ್ಯೆ ಬರುವ ಕೊಲ್ಲಿಯ ಬಳಿ ಬೃಹತ್ ಗಾತ್ರದ ಹೆಬ್ಬುಲಿ ಕಾಣಿಸಿಕೊಂಡಿದೆ.
ಕಾಡು ಕುರಿಯನ್ನು ಅಟ್ಟಿಸಿಕೊಂಡು ಹೋಗುಟ್ಟಿದ ಹುಲಿ ತೋಟದ ಕಾರ್ಮಿಕರಿಗೆ ಕಾಣಿಸಿದೆ. ಈ ಎರಡೂ ಗ್ರಾಮಗಳ ಜನ ಎಚ್ಚರಿಕೆಯಲ್ಲಿರುವಂತೆ ಸ್ಥಳೀಯರೊಬ್ಬರು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಕಾಡು ಪ್ರಾಣಿಗಳ ಓಡಾಟ ಹೆಚ್ಚಾಗಿದ್ದು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಂಡು ಮುಂದೆ ಆಗಬಹುದಾದ ಅನಾಹುತವನ್ನು ತಡೆಯುವಂತೆ ಆಗ್ರಹ ಪಡಿಸಿದ್ದಾರೆ.
