
ನಮ್ಮೂರಿನ ಶಾಲೆ ನಮ್ಮ ಶಾಲೆ ಎಂಬ ಮನಸಿನಿಂದ , ನಾವು ಕಲಿತ ಶಾಲೆಗೆ ನಮ್ಮ ಕೈಯಲ್ಲಾದ ಕೊಡುಗೆ ನೀಡಿದಲ್ಲಿ, ಶಾಲೆಯ ಅಭಿವೃದ್ದಿಗೆ ಅನುದಾನಕ್ಕಾಗಿ ಸರಕಾರಕ್ಕೆ ಕೈಚಾಚಬೇಕಾದ ಅನಿವಾರ್ಯತೆ ಸೃಷ್ಟಿಯಾಗುವುದಿಲ್ಲ, ಶಿಕ್ಷಣ ಪಡೆಯುವುದು ಮುಖ್ಯವಲ್ಲ, ಪಡೆದ ಶಿಕ್ಷಣದಿಂದ ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎನ್ನುವುದು ಪ್ರಮುಖವಾದುದು ,
ಎಂದು ಮಾಜಿ ಸಚಿವ, ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಎಸ್.ಅಂಗಾರ ಹೇಳಿದ್ದಾರೆ.ಅವರುಕುಕ್ಕುಜಡ್ಕದ ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಚೊಕ್ಕಾಡಿ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಸಂಭ್ರಮದ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ನಾನು ನನ್ನ ಶಾಸಕ ಅವಧಿ ಮತ್ತು ಮಂತ್ರಿಯಾಗಿದ್ದ ಸಂದರ್ಭದಲ್ಲಿ ,ತಂದೆಯ ಆಶಯದಂತೆ, ಯಾವುದೇ ಅಡ್ಡದಾರಿಗಳನ್ನು ಹಿಡಿದಿಲ್ಲ, ಈ ಮೂಲಕ ಯಾರ ಶಾಪಕ್ಕೂ ಒಳಗಾಗದಂತೆ ದುಡಿದಿದ್ದೇನೆ, ರಾಷ್ಟ್ರೀಯ ಸ್ವಯಂ ಸೇವಾ ಸಂಘ ನನಗೆ ಬದುಕಿನ ಪಾಠ ಹೇಳಿಕೊಟ್ಟಿತ್ತು ಎಂದು ಹೇಳಿದರು, ಶಾಲೆಯ ಅಭಿವೃದ್ದಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಶಿಕ್ಷಕರಾಗಿ ದುಡಿದು ಶಾಲಾಭಿವೃದ್ದಿಯಲ್ಲಿ ಅಹರ್ನಿಶಿ ದುಡಿದ ನಿವೃತ ಶಿಕ್ಷಕರಾದ ತಿರುಮಲೇಶ್ವರ ಭಟ್ ಶಾಂತಿಮೂಲೆ, ಲಕ್ಷ್ಮೀಶ ಚೊಕ್ಕಾಡಿ, ಸುಬ್ರಾಯ , ಜನಾರ್ಧನ, ರಾಜೇಶ್ವರಿ, ಚಂದ್ರಶೇಖರ ಮೂಕಮಲೆ, ಚಂದ್ರಶೇಖರ ಕೊಡಪಾಲ ರಿಗೆ ಗುರುವಂದನೆ ಸಲ್ಲಿಸಲಾಯಿತು, ಮತ್ತು ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಬೇಲೂರು ಪೂರ್ಣ ಪ್ರಜ್ಞಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿರುವ ಪ್ರಶಾಂತ್ ಕುಮಾರ್ ದಂಪತಿಗಳನ್ನು ಗೌರವಿಸಲಾಯಿತು,
ಮುಖ್ಯ ಅತಿಥಿಗಳಾಗಿದ್ದ ಸಾಪ್ಟವೇರ್ ಸ್ಕ್ಯಾನರೇ ಟೆಕ್ನಾಲಜಿ ಇದರ ನಿವೃತ ಜನರಲ್ ಮ್ಯಾನೇಜರ್ ತಿರುಮಲೇಶ್ವರ ಹೆಚ್ ಮಾತನಾಡಿ ವಿಧ್ಯೆ ಕಲಿಯುವಿಕೆಯ ಜೊತೆ ತಾಂತ್ರಕತೆಯನ್ನು ಅಡಕವಾಗಿಸಿಕೊಂಡು ಇತರ ಚಟುವಟಿಕೆಗಳು ಕಲಿತುಕೊಂಡಾಗ ಜೀವನ ಸುಗಮವಾಗಲು ಸಾಧ್ಯ, ಬಾಲ್ಯದಲ್ಲಿಯೇ ತಾಂತ್ರಿಕತೆ ಕಲಿಯಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು,ಕುಕ್ಕುಜಡ್ಕದ ಹಿರಿಯ ವೈದ್ಯರಾದ ಡಾ. ಗೋಪಾಲಕೃಷ್ಣ,ಸುಳ್ಯ ತಾಲೋಕು ಸಿ.ಡಿ.ಪಿ.ಒ ಶೈಲಜಾ ಕುಕ್ಕುಜಡ್ಕ ಮುಖ್ಯ ಅತಿಥಿಯಾಗಿ ಮಾತನಾಡಿದರು.ಶಾಲೆಗೆ ಪ್ರಯೋಗಾಲಯ ಕೊಡುಗೆ ನೀಡಿದ ಅವನಿ ಸಂಸ್ಥೆಯ ರಜನಿಕಾಂತ್ ಉಮ್ಮಡ್ಕ ಮಾತನಾಡಿದರು
ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಸಂಚಾಲಕ ರಾಧಾಕೃಷ್ಣ ಬೊಳ್ಳೂರು, ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವೇದಿಕೆಯಲ್ಲಿ ಉಪಾಧ್ಯಕ್ಷ ಅಣ್ಣಾಜಿ ಗೌಡ ಪೈಲೂರು, ಕಾರ್ಯದರ್ಶಿ ತೇಜಸ್ವಿ ಕಡಪಳ, ಖಜಾಂಜಿ ಹರ್ಷವರ್ಧನ ಬೊಳ್ಳೂರು,
ಜೊತೆ ಕಾರ್ಯದರ್ಶಿ ತಿಮ್ಮಪ್ಪ ಗೌಡ ಕೊಂಡೆಬಾಯಿ, ಚೊಕ್ಕಾಡಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಸಂಕೀರ್ಣ ಚೊಕ್ಕಾಡಿ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಚೈತ್ರ ಯು. ಪ್ರೌಢ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮೂಕಮಲೆ, ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಮಾಯಿಪಡ್ಕ , ಶಾಲಾ ವಿದ್ಯಾರ್ಥಿ ನಾಯಕ ಅಭಿಜಿತ್ ಕೆ,ವಿದ್ಯಾರ್ಥಿ ನಾಯಕಿ ಹಸ್ತಾ ಕೆ. ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರೀಡೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾದನೆ ಮಾಡಿದ ವಿದ್ಯಾರ್ಥಿಗಳು ಹಾಗೂ ವಿವಿದ ವರ್ಷಗಳ ಸಾಲಿನಲ್ಲಿ ಶಾಲೆಯ ಎಸ್ ಎಸ್ ಎಲ್ ಸಿಯಲ್ಲಿ ಅತೀ ಹೆಚ್ಚು ಅಂಕಪಡೆದ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.ತೇಜಸ್ವಿ ಕಡಪಳ ವಂದಿಸಿ,

ನಾರಾಯಣ ಮತ್ತು ಶಶಿ ಕಾರ್ಯಕ್ರಮ ನಿರೂಪಿಸಿದರು.
