ಕಡಬ: ಮನೆ ಎದುರು ಕಳೆ ಹುಲ್ಲು ತೆಗೆಯುವ ವೇಳೆ ಸಹೋದರರ ನಡುವೆ ತಕರಾರು; ಹಲ್ಲೆ, ಜೀವ ಬೆದರಿಕೆ..!

ಕಡಬ: ಮನೆ ಎದುರು ಕಳೆ ಹುಲ್ಲು ತೆಗೆಯುವ ವೇಳೆ ಸಹೋದರರ ನಡುವೆ ತಕರಾರು; ಹಲ್ಲೆ, ಜೀವ ಬೆದರಿಕೆ..!

ಕಡಬದಲ್ಲಿ ಹುಲ್ಲು ತೆಗೆಯುವ ಮೆಷಿನ್ ಎಳೆದೊಯ್ದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.ಆರೋಪಿಯನ್ನು ವಸಂತ ಹಾಗೂ ಅವರ ಪತ್ನಿ ಹೇಮಲತಾ ಎಂದು ಗುರುತಿಸಲಾಗಿದೆ.

ರೆಂಜಿಲಾಡಿ ಗ್ರಾಮ, ಕಡಬ ತಾಲೂಕು ಗಂಗಾಧರ ಅವರು ತಮ್ಮ ಮನೆಯ ಎದುರಿನಲ್ಲಿ ಬೆಳೆದಿರುವ ಕಳೆ ಹುಲ್ಲನ್ನು ಮಿಷಿನಿನಲ್ಲಿ ತೆಗೆಯುತ್ತಿದ್ದರು. ಈ ವೇಳೆ ಅಣ್ಣ ಆರೋಪಿ ವಸಂತರವರು ಅಲ್ಲಿಗೆ ಬಂದು ಹುಲ್ಲು ತೆಗೆಯುವ ವಿಚಾರದಲ್ಲಿ ತಕರಾರು ಮಾಡಿ, ಕೈಯಲ್ಲಿದ್ದ ಮಿಷನನ್ನು ಎಳೆದುಕೊಂಡು ಗಂಗಾಧರ ಮತ್ತು ಅವರ ಪತ್ನಿ ಗುಣಶ್ರೀ ರವರಿಗೆ ಹಲ್ಲೆ ನಡೆಸಿರುತ್ತಾರೆ.

ಬಳಿಕ ಆರೋಪಿ ಹಾಗೂ ಅತ್ತಿಗೆಯಾದ ಹೇಮಲತಾರವರು ಜೀವ ಬೆದರಿಕೆಯನ್ನು ಹಾಕಿರುತ್ತಾರೆ. ಈ ಬಗ್ಗೆ ನೀಡಿದ ದೂರಿನಂತೆ ಕಡಬ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ರಾಜ್ಯ