ಕೊಡಿಯಾಲ : ಕಲ್ಪಡ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ವತಿಯಿಂದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ:

ಕೊಡಿಯಾಲ : ಕಲ್ಪಡ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ವತಿಯಿಂದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ:

ಸುಳ್ಯ : ಕೊಡಿಯಾಲ ಕಲ್ಪಡ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇವರ ಸಹಭಾಗಿತ್ವದಲ್ಲಿ ಪುರುಷರ 62 ಕೆ.ಜಿ. ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನನಾ ಕಾರ್ಯಕ್ರಮವನ್ನು ಡಿ.31ರಂದು ಮೂವಪ್ಪೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆಸಲಾಯಿತು.ಸಭಾ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಎಸೋಸಿಯೇಷನ್ ಅಧ್ಯಕ್ಷ ಮಾಧವ ಬಿ.ಕೆ. ದೀಪ ಬೆಳಗಿಸಿ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು,ಕ್ರೀಡಾಕೂಟಗಳು ಎಲ್ಲರನ್ನೂ ಒಗ್ಗೂಡಿಸುವುದರ ಜೊತೆಗೆ ಜಾತಿ, ಧರ್ಮ, ರಾಜಕೀಯದ ಬೇದಗಳನ್ನು ತೊಡೆದು ಹಾಕಿ ಸದೃಡ ಸಮಾಜ ನಿರ್ಮಾಣವಾಗಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ ಕೂಟವನ್ನು ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಆಯೋಜಿಸುವುದರ ಮೂಲಕ ಮಾದರೀ ಕಾರ್ಯ ಮಾಡಿದೆ ಎಂದು ಶ್ಲಾಘಿಸಿದರು.


ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ನ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ.ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬೆಳ್ಳಾರೆ ಡಿ.ಸಿ.ಸಿ.ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಮರಕ್ಕಡ, ಬೆಳ್ಳಾರೆ ಪ್ರಾ.ಕೃ.ಪ.ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು, ಸುಳ್ಯ ತಾಲೂಕು ಕ್ರೀಡಾಭಾರತಿ ಅಧ್ಯಕ್ಷ ಎ.ಸಿ.ವಸಂತ್, ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಕಾರ್ಯದರ್ಶಿ ಹರ್ಷನ್ ಕೆ.ಟಿ, ಉಪಾಧ್ಯಕ್ಷೆ ಶ್ರೀಮತಿ ಚಿತ್ರಾ ದಿನೇಶ್, ಮೂವಪ್ಪೆ ಶಾಲಾ ಶಿಕ್ಷಕಿ ಕಾಣಿಯೂರು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕಿರಣ್ ಮಲೆಕೆರ್ಚಿ, ಶಾಲಾ ಶಿಕ್ಷಕಿ ಶ್ರೀಮತಿ ಪುಷ್ಪಾ, ಕಾಣಿಯೂರು ಸ.ಹಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ,ಬೆಳ್ಳಾರೆ ಸಹಕಾರಿ ಬ್ಯಾಂಕ್ ನಿರ್ದೇಶಕ ಸುಂದರ ಗೌಡ ಪೋಳಾಜೆ,ಪದ್ಮಯ್ಯ ಗೌಡ ತೋಟ ಕಲ್ಪಡ,ಮೂವಪ್ಪೆ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಲಕ್ಷ್ಮಣ ಕಣಿಲೆಗುಂಡಿ ಉಪಸ್ಥಿತರಿದ್ದರು.ಬಳಿಕ ೬೨ ಕೆ .ಜಿ ವಿಭಾಗದ ಪುರುಷರ ಕಬಡ್ಡಿ ಫಂದ್ಯಾಟ ನಡೆಸಲಾಯಿತು ಒಟ್ಟು 32 ತಂಡಗಳು ಸ್ಪರ್ದೆಯಲಿದ್ದು ಅಂತಿಮವಾಗಿ ರೋಚಕ ಹಣಾಹಣಿಯಲ್ಲಿ ತಮಿಳು ನಾಡು ಆಟಗಾರರನ್ನು ಹೊಂದಿದ್ದ ತಂಡ ಉತ್ಸಾಹಿ ಗೆಳೆಯರ ಬಳಗ ಪುಂಚತ್ತಾರು ತಂಡ. ಸದಾಶಿವ ಗೆಳೆಯರ ಬಳಗ ಅಗಳಿ ತಂಡವನ್ನು ಹಿಮ್ಮೆಟ್ಟಿಸಿ ಪ್ರಥಮ ಸ್ಥಾನಿಯಾಯಿತು, ಸದಾಶಿವ ಗೆಳೆಯರ ಬಳಗ ಅಗಳಿ ರನ್ನರ್ ಆಗಿ ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯಿತು, ಸೆವೆನ್ ಸ್ಟಾರ್ ಬೆಳಂದೂರು ತೃತೀಯ, ಹಾಗೂ ಸೆವೆನ್ ಸ್ಟಾರ್ ಕಲ್ಪಣೆ ಬಂಟ್ವಾಳ ಚತುರ್ಥ ಸ್ಥಾನಿಯಾಯಿತು. ಕೋಲಾರ ಹಾಗೂ ಮಂಡ್ಯ ತಂಡಗಳು ಬಾಗವಹಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಶ್ರೀಮತಿ ಪುಷ್ಪಾರವರು ಪ್ರಾರ್ಥಿಸಿ, ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ನ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ.ಸ್ವಾಗತಿಸಿ, ಗಣೇಶ ನಡುವಾಲ್ ಕಾರ್ಯಕ್ರಮ ನಿರೂಪಿಸಿ, ಶೇಖರ ಕೆ.ಪಿ.ವಂದಿಸಿದರು.
ಟ್ರಸ್ಟ್ ನ ಕೋಶಾಧಿಕಾರಿ ಜಯಂತ್ ಕಾಯರ್ತಡ್ಕ,ಉಪಾಧ್ಯಕ್ಷ ಕೊರಗಪ್ಪ ಕೆ.ಕೆ,ಜೊತೆ ಕೋಶಾಧಿಕಾರಿ ಭಾಸ್ಕರ ತೋಟ,ಜೊತೆ ಕಾರ್ಯದರ್ಶಿ ಗಣೇಶ್ ಪೆರ್ಲೋಡಿ ಹಾಗೂ ಸರ್ವಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ರಾಜ್ಯ