ಡಿ.16 ಮತ್ತು 17 ರಂದು ಪೇರಡ್ಕ-ಗೂನಡ್ಕದ ಮುಹಿಯ್ಯದ್ದೀನ್ ಜುಮಾ ಮಸೀದಿಯಲ್ಲಿಇಸ್ಲಾಮಿಕ್ ಕಥಾಪ್ರಸಂಗ ಹಾಗೂ ದಫ್ ಪ್ರದರ್ಶನ.

ಡಿ.16 ಮತ್ತು 17 ರಂದು ಪೇರಡ್ಕ-ಗೂನಡ್ಕದ ಮುಹಿಯ್ಯದ್ದೀನ್ ಜುಮಾ ಮಸೀದಿಯಲ್ಲಿಇಸ್ಲಾಮಿಕ್ ಕಥಾಪ್ರಸಂಗ ಹಾಗೂ ದಫ್ ಪ್ರದರ್ಶನ.

ಪೇರಡ್ಕ-ಗೂನಡ್ಕದ ಮುಹಿಯ್ಯದ್ದೀನ್ ರಿಫಾಯಿ ದಫ್ ಅಸೋಸಿಯೇಷನ್ ವತಿಯಿಂದ ಡಿ.16 ಮತ್ತು 17 ರಂದು ಇಸ್ಲಾಮಿಕ್ ಕಥಾಪ್ರಸಂಗ ಹಾಗೂ ದಫ್ ಪ್ರದರ್ಶನ ನಡೆಯಲಿದೆ ಎಂದು ಮಹಿಯ್ಯದ್ದೀನ್ ಜುಮಾ ಮಸೀದಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ತಿಳಿಸಿದ್ದಾರೆ.


ಮಡಿಕೇರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸ ಪ್ರಸಿದ್ದ ಸರ್ವ ಧರ್ಮಗಳ ಸಮನ್ವಯ ಕೇಂದ್ರ ಪೇರಡ್ಕ ಮುಹಿಯ್ಯದ್ದೀನ್ ಜುಮಾ ಮಸೀದಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಡಿ.16 ರಂದು ಝಬೈರ್ ಮಾಸ್ಟರ್ ತೋಟಿಕಲ್ ಹಾಗೂ ಸಂಘಡಿಗರಿಂದ “ಮಣಲಾರುಣ್ಯತ್ತಿಲೆ ಚೋರ ಪೈದಲ್” ಎಂಬ ವಿಷಯದ ಕುರಿತು ಇಸ್ಲಾಮಿಕ್ ಕಥಾಪ್ರಸಂಗ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಂದು ಸಂಜೆ 7 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಪೇರಡ್ಕ-ಗೂನಡ್ಕ ಎಂಜೆಎಂ ಖತೀಬರಾದ ರಿಯಾಝ್ ಪೈಝಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎಂಜೆಎಂ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅರಂತೋಡುವಿನ ಬಿಜೆಎಂ ಖತೀಬರಾದ ಇಸಾಖ್ ಬಾಖವಿ, ಸುಳ್ಯದ ಆದಂ ಹಾಜಿ ಕಮ್ಮಾಡಿ, ಸುಳ್ಯ ಗಾಂಧಿನಗರದ ಎಂಜೆಎಂ ಅಧ್ಯಕ್ಷ ಕೆ.ಎಂ.ಮುಸ್ತಫ, ಕರ್ನಾಟಕ ಸರ್ಕಾರದ ಕೆಫೆಕ್ ಮಾಜಿ ನಿರ್ದೇಶಕ ಪಿ.ಎ.ಮಹಮ್ಮದ್, ಕಾಸರಗೋಡಿನ ಗುತ್ತಿಗೆದಾರ ಎಂ.ಎ.ನಿಝಾರ್ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಳ್ಳಿದ್ದಾರೆ ಎಂದು ತಿಳಿಸಿದರು.
ಡಿ.17 ರಂದು ಸಂಜೆ 4 ಗಂಟೆಗೆ ವಿವಿಧ ಮದರಸ ಮಕ್ಕಳ ಆಕರ್ಷಕ ದಫ್ ಪ್ರದರ್ಶನ ಮೆರವಣಿಯು ಗೂನಡ್ಕ ಸಜ್ಜನ ಸಭಾ ಭವನದಿಂದ ಪ್ರಾರಂಭವಾಗಲಿದ್ದು, ಕಲ್ಲುಗುಂಡಿ ಫಾತಿಮಾ ಮಹಿಳಾ ಶರೀಅತ್ ಕಾಲೇಜಿನ ಅಧ್ಯಕ್ಷ ಎಸ್.ಆಲಿಹಾಜಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುಳ್ಯದ ನ.ಪಂ ಸದಸ್ಯರಾದ ಶರೀಫ್ ಕಂಠಿ, ಕೆ.ಎಸ್.ಉಮ್ಮರ್, ಕಲ್ಲುಗುಂಡಿ ಎಂ.ಜೆ.ಎಂ ಮಾಜಿ ಅಧ್ಯಕ್ಷ ಕೆ.ಎಂ.ಅಶ್ರಫ್ ಸಿದ್ದಿಕ್ ಕೊಕೊ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಸಂಜೆ 7 ಗಂಟೆಗೆ ಪೇರಡ್ಕ ಎಂಆರ್‍ಡಿಎ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಆದೂರು ಸಯ್ಯಿದ್ ಹಕ್ಕೀಂ ತಂಙಳ್ ದುಃಆ ನೆರವೇರಿಸಲಿದ್ದಾರೆ.
ಪೇರಡ್ಕ ಎಂಜೆಎಂ ಖತೀಬ್ ರಿಯಾಝ್ ಫೈಝಿ ಎಮ್ಮೆಮಾಡು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಪೇರಡ್ಕ-ಗೂನಡ್ಕ ಎಂ.ಜೆ.ಎಂ ಅಧ್ಯಕ್ಷ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಧ್ಯಕ್ಷರಾದ ಟಿ.ಎಂ.ಶಹೀದ್ ತೆಕ್ಕಿಲ್ , ಕಲ್ಲುಗುಂಡಿ ಎಂಡಿಎಂ ಖತೀಬ್ ನಈಮ್ ಪೈಝಿ, ಸಂಪಾಜೆ ಬಿಜೆಎಂ ಖತೀಬ್ ಹಾಜಿ ಜಮಾಲುದ್ದೀನ್ ಅಲ್-ಅಮಾನಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮಾನವ ಸಂಪನ್ಮೂಲ ಉಪಾಧ್ಯಕ್ಷ ಹಾಗೂ ಬೆಂಗಳೂರಿನ ತರಬೇತಿ ಮತ್ತು ಆಡಳಿತದ ಹಿರಿಯ ಕಾರ್ಯನಿರ್ವಾಹಕ ಡಾ.ಉಮ್ಮರ್ ಬೀಜದಕಟ್ಟೆ, ಜನರಲ್ ಮ್ಯಾನೇಜರ್ ಪಿ ಎಂ ಹಾರಿಸ್ ತೆಕ್ಕಿಲ್ ಬೆಳ್ಳಾರೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಯು.ಹೆಚ್.ಅಬೂಬಕ್ಕರ್, ದ.ಕ.ಜಿಲ್ಲಾ ಮದರಸ ಮೇನೇಜ್‍ಮೆಂಟ್ ಕೋಶಾಧಿಕಾರಿ ಅಬ್ದುಲ್ ಖಾದರ್, ಸಂಪಾಜೆ ಗ್ರಾ.ಪಂ ಉಪಾಧ್ಯಕ್ಷ ಎಸ್.ಕೆ.ಹನೀಫ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಶಹೀದ್ ತೆಕ್ಕಿಲ್ ತಿಳಿಸಿದರು.ಎರಡು ದಿವಸಗಳ ಕಾಲ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಇದ್ದು ಕೊನೆಯ ದಿವಸ ಸೀರಾಣಿ ವಿತರಣೆ ಇದೆ
ಎಂದು ಸುದ್ದಿಗೋಷ್ಠಿಯಲ್ಲಿ ಪೇರಡ್ಕ ಎಂಆರ್‍ಡಿಎ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ತಿಳಿಸಿದರು, ಪೇರಡ್ಕ-ಗೂನಡ್ಕ ಎಂಜೆಎಂ ಪ್ರಧಾನ ಕಾರ್ಯದರ್ಶಿ ಪಿ.ಕೆ.ಉಮ್ಮರ್ ಗೂನಡ್ಕ, ಎಂ ಆರ್ ಡಿ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಗಾರ, ಕೋಶಾಧಿಕಾರಿ ಜಾಕಿರ್ ಹುಸೇನ್ ಪೇರಡ್ಕ ಉಪಸ್ಥಿತರಿದ್ದರು.

ರಾಜ್ಯ