ಸಿಎಂ, ಗಣ್ಯರ ಅಂತಿಮ ದರ್ಶನ : ಎಲ್ಲಿ ನಡೆಯುತ್ತೆ ಲೀಲಾವತಿ ಅಂತ್ಯಕ್ರಿಯೆ?

ಸಿಎಂ, ಗಣ್ಯರ ಅಂತಿಮ ದರ್ಶನ : ಎಲ್ಲಿ ನಡೆಯುತ್ತೆ ಲೀಲಾವತಿ ಅಂತ್ಯಕ್ರಿಯೆ?

ಬೆಂಗಳೂರು : ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಲೀಲಾವತಿ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಿನ್ನೆ ಸಂಜೆ ಈ ಲೋಕ ಬಿಟ್ಟು ತೆರಳಿದ್ದಾರೆ. ಅವರ ಅಗಲಿಕೆಗೆ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಸೇರಿದಂತೆ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಅಂಬೇಡ್ಕರ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 10:45ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ಮೃತದೇಹವನ್ನ ತೆಗೆದುಕೊಂಡು ಹೋಗಲಾಗುತ್ತೆ. ಅಲ್ಲಿ ಗಣ್ಯರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಲಿದ್ದಾರೆ.

ಇತರ ಗಣ್ಯರೂ ಅಂತಿಮ ದರ್ಶನ ಪಡೆದ ಬಳಿಕ ನೆಲಮಂಗಲದ ಸೋಲದೇವನಹಳ್ಳಿಯ ವಿನೋದ್ ರಾಜ್​ ಅವರ ತೋಟದಲ್ಲಿ ಮಧ್ಯಾಹ್ನ 2.30 ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಬಂಟರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
ರಾಜ್ಯ