
ಜಮ್ಮು ಕಾಶ್ಮೀರಕ್ಕೆ ಒಮ್ಮೆಯೋ ಕಾಲಿರಿಸದ ಸುಳ್ಯದ ವ್ಯಕ್ತಿಯೊಬ್ಬರ ದಾಖಲೆ ಬಳಸಿ ಜಮ್ಮು ಕಾಶ್ಮೀರದಲ್ಲಿ ನಕಲಿ ದಾಖಲೆ.. ಹೌದು ಸುಳ್ಯದ ನಗರದ ಕುರುಂಜಿಗುಡ್ಡೆ ನಿವಾಸಿಯೊಬ್ಬರ ಹೆಸರಿನಲ್ಲಿ ಜಮ್ಮು ಕಾಶ್ಮೀರದಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಮತ್ತೊಂದು ಓಟರ್ ಐಡಿ ಪಡೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ , ಸುಳ್ಯ ಕುರುಂಜಿಭಾಗ್ ನಿವಾಸಿ ಸಂತೋಷ್ ನಾಯರ್ ಎನ್ನುವವರ ಓಟರ್ ಐಡಿ ಬಳಸಿ, ತದ್ರೂಪ್ ಪೋಟೊ ಬಳಸಿ ಕನಕರಾಜ್ ಹೆಸರಲ್ಲಿ ಓಟರ್ ಐಡಿ ಯನ್ನು ಜಮ್ಮು ಕಾಶ್ಮೀರದ ಬೊನಾಪುರ ಕುದ್ವಾನಿ ವಿಳಾಸದಲ್ಲಿ ಪಡೆಯಲಾಗಿದೆ, ಸುಳ್ಯ ದ ಸಂತೋಷ್ ಈಗಾಲೆ ಸುಳ್ಯದಲ್ಲಿ ಓಟರ್ ಐಡಿ ಪಡೆದುಕೊಂಡಿದ್ದು ಇದೀಗ ದಾಖಲೆ ಪರಿಶೀಲಿಸುವಾಗ ಮತ್ತೊಂದು ಓಟರ್ ಐಡಿ ಇರುವುದು ಗೊತ್ತಾಗಿ ಸಂತೋಷ್ ಆತಂಕಕ್ಕೆ ಒಳಗಾಗಿದ್ದಾರೆ.

ಹಾಗೂ ಇನೆಷ್ಟು ಮಂದಿ ಈ ರೀತಿಯ ವಂಚನಾ ಜಾಲಕ್ಕೆ ಬಲಿಯಾಗಿದ್ದಾರೋ ಎಂದು ಸರಕಾರಗಳು ಪೂರ್ಣ ಪ್ರಮಾಣದ ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ, ಹಾಗೂ ಈ ಎಲ್ಲಾ ಚಟುವಟಿಕೆಗಳ ಹಿಂದೆ ಬಯತ್ಪಾದನಾ ಸಂಘಟನೆಗಳ ಕೈವಾಡ ಇರಬಹುದಾ ಎಂಬ ಸಂಶಯ ವ್ಯಕ್ತ ಪಡಿಸಿದ್ದಾರೆ.ದಾಖಲೆ ವ್ಯವಸ್ಥೆ ಗೌಪ್ಯವಾಗಿರುವಾಗ ಮತ್ತೊಬ್ಬರ ಹೆಸರಿನಲ್ಲಿ ದಾಖಲೆ ಪಡೆಯಲು ಸಾದ್ಯವಾದುದಾದರೂ ಹೇಗೆ ಎಂಬುದು ಪ್ರಶ್ನೆಯಾಗಿದೆ.

