ಚಲಿಸುತ್ತಿದ್ದ ರೈಲಿನಿಂದ  ಹೊರಕ್ಕೆ ಎಸೆಯಲ್ಪಟ್ಟು ವಿದ್ಯಾರ್ಥಿ ಗಂಭೀರ.

ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಎಸೆಯಲ್ಪಟ್ಟು ವಿದ್ಯಾರ್ಥಿ ಗಂಭೀರ.

ಕುಂಬಳೆ ಶಿರಿಯದಲ್ಲಿ ಚಲಿಸುತ್ತಿದ್ದ ರೈಲಿನಿಂದ ವಿದ್ಯಾರ್ಥಿಯೋರ್ವ ಹೊರಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಕೇರಳದಿಂದ ಗೋವಾ ಪ್ರವಾಸಕ್ಕೆ ತೆರಳಿದ್ದ 35ರಷ್ಟು ವಿದ್ಯಾರ್ಥಿಗಳು ವಾಪಸಾಗುತ್ತಿದ್ದಾಗ ರೈಲಿನಲ್ಲಿ ಶೌಚಾಲಯಕ್ಕೆ ಹೋಗುವ ವೇಳೆ ಆಯತಪ್ಪಿ ರೈಲುಗಾಡಿಯಿಂದ ಹೊರಕ್ಕೆಸೆಯಲ್ಪಟ್ಟ ಮಲಪ್ಪುರಂ ಕೊಂಡೋಟಿ ನಿವಾಸಿ, ದ್ವಿತೀಯ ವರ್ಷ ಪದವಿ ವಿದ್ಯಾರ್ಥಿ ಫಾಯಿ (20) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನು ಗಮನಿಸಿದ ಇತರ ವಿದ್ಯಾರ್ಥಿಗಳು ತಕ್ಷಣ ರೈಲು ಗಾಡಿಯನ್ನು ಚೈನ್ ಎಳೆದು ನಿಲ್ಲಿಸಿದರು ಎಂದು ತಿಳಿದು ಬಂದಿದೆ.

Uncategorized ರಾಜ್ಯ