ಸುಳ್ಯದ ಗ್ಯಾರೇಜ್ ನಲ್ಲಿ ಕೇರಳ ಮೂಲದ ಉದ್ಯೋಗಿ ಕುಸಿದು ಬಿದ್ದು ಮೃತ್ಯು.

ಸುಳ್ಯದ ಗ್ಯಾರೇಜ್ ನಲ್ಲಿ ಕೇರಳ ಮೂಲದ ಉದ್ಯೋಗಿ ಕುಸಿದು ಬಿದ್ದು ಮೃತ್ಯು.

ಸುಳ್ಯ ಮೆಸ್ಕಾಂ ಕಚೇರಿಯ ಎದುರುಗಡೆ ಇರುವ ಭಗವತಿ ಗ್ಯಾರೇಜ್ ನಲ್ಲಿ ಉದ್ಯೋಗಿಯಾಗಿದ್ದ ಕೇರಳ ಕೊಲ್ಲಂ ನಿವಾಸಿ ಮಣಿ ಎಂಬವರು ತಾನು ಕೆಲಸ ಮಾಡುತ್ತಿದ್ದ ಗ್ಯಾರೇಜ್ ನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಗ್ಯಾರೇಜ್ ನಲ್ಲಿ ಆರು ತಿಂಗಳ ಹಿಂದೆ ಪೈಂಟಿಂಗ್ ಕೆಲಸಕ್ಕೆ ಸೇರಿದ್ದರು.ಡಿ.3 ರಂದು ರಾತ್ರಿ ಕೆಲಸ ಮುಗಿಸಿ ಗ್ಯಾರೇಜ್ ನಲ್ಲಿ ಕುಳಿತಿರುವಾಗ ಸಡನ್ನಾಗಿ ಕುಸಿದು ಬಿದ್ದು ‌ಮೃತ ಪಟ್ಟಿದ್ದಾರೆ.ಅವರ ಮೃತದೇಹ ಸುಳ್ಯ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.ಕೊಲ್ಲಂ ನಿಂದ ಅವರ ಮನೆಯವರು ಬಂದು ಮೃತದೇಹವನ್ನು ಕೊಲ್ಲಂ ಗೆ ಕೊಂಡೊಯ್ಯಲಿದ್ದಾರೆ ತಿಳಿದು ಬಂದಿದೆ

ರಾಜ್ಯ