ಉಳ್ಳಾಲ: ವಾಹನ ಕಳವು ಆರೋಪಿ ಸೆರೆ – ಮೂರು ದ್ವಿಚಕ್ರ ವಾಹನಗಳು ವಶಕ್ಕೆ.

ಉಳ್ಳಾಲ: ವಾಹನ ಕಳವು ಆರೋಪಿ ಸೆರೆ – ಮೂರು ದ್ವಿಚಕ್ರ ವಾಹನಗಳು ವಶಕ್ಕೆ.

ಮಂಗಳೂರು: ವಾಹನ ಕಳವುಗೈದ ಪ್ರಕರಣದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿ ಆತನಿಂದ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ಮ ಗ್ರಾಮದ ಕನಕೂರು ಸೈಟ್ ನಿವಾಸಿ ಹುಸೈನ್ ಜಾಹೀದ್ (24)ಬಂಧಿತ ಆರೋಪಿ.
ಹುಸೈನ್ ಜಾಹೀದ್ ಉಳ್ಳಾಲ ತಾಲೂಕಿನ ಅಂಬ್ಲಮೊಗರು ಗ್ರಾಮದ ತಿಲಕನಗರ ಮತ್ತು ಬೆಳ್ಮ ಗ್ರಾಮದ ದೇರಳಕಟ್ಟೆಯ ಗ್ರೀನ್ ಗೌಂಡ್‌ನಲ್ಲಿ ಈ ಹಿಂದೆ ವಾಹನ ಕಳವುಗೈದಿದ್ದ. ಅ.22ರಂದು ಅಂಬ್ಲಮೊಗರು ಗ್ರಾಮದ ಐಸಮ್ಮರವರ‌ ಹೋಂಡಾ ಡೀಯೋ ಮತ್ತು ನ.16ರಂದು ದೇರಳಕಟ್ಟೆಯ ಗುಲಾಮ್ ಹುಸೇನ್ ಎಂಬವರ ಹೋಂಡಾ ಆಕ್ಟಿವಾ ವಾಹನ ಕಳವಾಗಿತ್ತು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿ ಹುಸೈನ್ ಜಾಹೀದ್ ಎಂದು ತಿಳಿದು ಬಂದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ

ರಾಜ್ಯ