
ಉಡುಪಿ: ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ದೇವಾಡಿಗರಬೆಟ್ಟು ಗ್ರಾಮದಲ್ಲಿ ಬೃಹತ್ ಹೆಬ್ಬಾವೊಂದು ಕಾಣಿಸಿಕೊಂಡಿದೆ.
ಖ್ಯಾತ ಉರಗತಜ್ಞ ಸುಧೀಂದ್ರ ಐತಾಳ್ ಜೊತೆ ಮಗ ಧೀರಜ್ ಎಂಬಾತ ತಂದೆಯ ಜೊತೆ ಸೇರಿ ಹೆಬ್ಬಾವನ್ನು ಹಿಡಿದಿದ್ದಾನೆ. ಬಾಲಕನ ಸಾಹಸದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಸುಧೀಂದ್ರ ಐತಾಳ್ ಅವರ ಮಗ ಧೀರಜ್ ಐತಾಳ್, ಏಳನೇ ತರಗತಿ ಕಲಿಯುತ್ತಿದ್ದಾನೆ. ಈಗಲೇ ತಂದೆಯ ಜೊತೆ ಸೇರಿ ಹಾವು ಹಿಡಿಯಲು ಮುಂದಾಗಿದ್ದು, ತಂದೆಯ ಹಾವು ಹಿಡಿಯುವ ಸಾಹಸ ಕಂಡು ಮಗನು ಹಾವು ಹಿಡಿಯಲು ಕೈಜೋಡಿಸಿದ್ದಾರೆ.

