
ಸುಳ್ಯ ತಾಲ್ಲೂಕು ಕ್ರೀಡಾ ಕೂಟವನ್ನು ಯಶಸ್ವಿ ಯಾಗಿ ನಡೆಸಿದ ಸಂತ ಜೋಸೆಫ್ ಶಾಲೆ ಯ ವತಿಯಿಂದ ಸಹಕಾರ ನೀಡಿ ದ ವಿವಿಧ ಸಮಿತಿ ಸದಸ್ಯರಿಗೆ, ಪೋಷಕರಿಗೆ, ಶಿಕ್ಷಕರಿಗೆ ಹಾಗೂ ಶಾಲಾ ಸಿಬ್ಬಂದಿಗಳಿಗೆ ಕ್ರತಜ್ಞತೆ ಅರ್ಪಿಸುವ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರಗಿತು.ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಫಾ ವಿಕ್ಟರ್ ಡಿ ಸೋಜ ವಹಿಸಿ ಸಹಕರಿಸಿದ ಸರ್ವರಿಗೂ ಕ್ರತಜ್ಞತೆ ಅರ್ಪಿಸಿದರು.ವೇದಿಕೆಯಲ್ಲಿ ಪ್ರಾ ಶಾಲಾ ಪೋಷಕರ ಸಂಘದ ಅಧ್ಯಕ್ಷ ಜೆ ಕೆ ರೈ, ಪ್ರೌ ಶಾಲಾ ಪೋಷಕರ ಸಂಘದ ಅಧ್ಯಕ್ಷ ಗುರುಸ್ವಾಮಿ, ದೈಹಿಕ ಶಿಕ್ಷಣಾಧಿಕಾರಿ ಸೂಫಿ ಪೆರಾಜೆ,ಮುಖ್ಯಶಿಕ್ಷಕರಾದ ಸಿ.ಬಿನೋಮ, ಸಿ ಆಂಟನಿ ಮೇರಿ, ನ ಪ ಸದಸ್ಯರಾದ ಡೇವಿಡ್ ಕ್ರಾಸ್ತ, ನವೀನ್ ಮಚಾದೋ, ದೈಹಿಕ ಶಿಕ್ಷಕರಾದ ಕೊರಗಪ್ಪ, ಉಮೇಶ್, ಪುಷ್ಪ ವೇಣಿ, ನಿಹಾಲ್ ಮತ್ತಿತರರು ಉಪಸ್ಥಿತರಿದ್ದರು.ಶಾಲಾ ಮುಕ್ಯೋಪಾಧ್ಯಾಯಿನಿ ಸಿ ಬಿನೋಮ ಸ್ವಾಗತಿಸಿ ಪುಷ್ಪವೇಣಿ ವಂದಿಸಿದರು, ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

