
ನವೆಂಬರ್ 13: ಮನೆಯ ಅಂಗಳದಲ್ಲೇ ಕಾರಿನಡಿಗೆ ಸಿಲುಕಿ ಪುಟ್ಟ ಮಗು ಸಾವನಪ್ಪಿದ ಘಟನೆ ಉಪ್ಪಳ ಸಮೀಪದ ಸೋಂಕಾಲ್ ನಲ್ಲಿ ನಡೆದಿದೆ. ಸದ್ಯ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಮೃತ ಬಾಲಕನನ್ನು ಸೋಂಕಾಲ್ ಕೊಡಂಗೆಯ ನಿಸಾರ್ ರವರ ಪುತ್ರ ಒಂದೂವರೆ ವರ್ಷದ ಮಸ್ತುಲ್ ಜಿಶಾನ್ ಎಂದು ಗುರುತಿಸಲಾಗಿದೆ. ಜಿಶಾನ್ ನ ಚಿಕಪ್ಪ ಕಾರು ಮುಂದಕ್ಕೆ ತೆಗೆಯುತ್ತಿದ್ದಾಗ ಅಲ್ಲೇ ನಿಂತಿದ್ದ ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಕಾರಿನಡಿಗೆ ಸಿಲುಕಿದ್ದ ಬಾಲಕನನ್ನು ಆಸ್ಪತ್ರೆಗೆ ತಲಪಿಸದರೂ ಜೀವ ಉಳಿಸಲಾಗಲಿಲ್ಲ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ

