
ಗುತ್ತಿಗಾರು ಪ್ರಗತಿ ಪರ ಕೃಷಿಕ ಸಿರಿಯಾಕ್ ಮ್ಯಾಥ್ಯೂ ರವರ ಮಗ ಸೈಬಿನ್ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ ಆತನಿಗೆ ೩೫ ವರ್ಷ ವಯಸ್ಸಾಗಿತ್ತು. ಈತನ ತಂದೆ ಸಿರಿಯಾಕ್ ಮಾಥ್ಯು ನಾಪತ್ತೆಯಾಗಿ ಎರಡು ತಿಂಗಳು ಕಳೆದಿದ್ದು ಇನ್ನು ಪತ್ತೆಯಾಗಿರಲಿಲ್ಲ , ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ, ಸೈಬಿನ್ ತಾಯಿ ಮೃತಪಟ್ಟು ನಾಳೆಗೆ ಐದು ವರ್ಷ ಆಗಿದ್ದು ಅವರ ಸ್ಮರಣೆ ಕಾರ್ಯಕ್ರಮಕ್ಕೆ ಆತನ ದೊಡ್ಡಮ್ಮ ಮತ್ತು ಚಿಕ್ಕಮ್ಮ ಬಂದಿದ್ದು , ಆತನ ಪತ್ನಿ ಹಾಗೂ ಪುತ್ರ ಶಾಲೆ ರಜೆ ಹಿನ್ನಲೆ ತವರಿಗೆ ತೆರಳಿದ್ದರು ಮದ್ಯಾಹ್ನ ಊಟವಾದ ಬಳಿಕ ಸೈಬಿನ್ ಬೆಂಕಿ ಹಚ್ಚಿಕೊಂಡಿರಬಹುದು ಎನ್ನಲಾಗಿದೆ, ಹೆಚ್ಚಿನ ವಿವರ ತಿಳಿದು ಬರಬೇಕಾಗಿದೆ.

