
ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಲ್ಚಾರಿನ ಕುಡೆಂಬಿ ಎಂಬಲ್ಲಿ ಮಹಿಳೆಯೋರ್ವರ ಶವ ಪಕ್ಕದ ಮನೆಯವರ ಕೆರೆಯಲ್ಲಿ ಪತ್ತೆಯಾಗಿದೆ.
ಮೃತ ಪಟ್ಟ ಮಹಿಳೆಯನ್ನು ಗಿರೀಶ್ ಪಡ್ಡಂಬೈಲು ರವರ ಪತ್ನಿ ಶ್ರೀಮತಿ ತೀರ್ಥಕುಮಾರಿ( 31) ಎಂದು ಹೇಳಲಾಗಿದೆ ಇವರು ಕಳೆದ ಕೆಲ ದಿನಗಳಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದರು ,ನಿನ್ನೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬರಲಾಗಿತ್ತು.
ಅವರು ರಾತ್ರಿ ವೇಳೆಯಲ್ಲಿ ಮನೆಯವರು ಮಲಗಿದ್ದ ನಂತರ ಎದ್ದು ಹೋಗಿದ್ದು ಬೆಳಗ್ಗೆ ಎದ್ದು ನೋಡಿದಾಗ ಕಾಣಿಸಿಲ್ಲವಾದ್ದರಿಂದ ಹುಡುಕಾಟ ನಡೆಸಿದಾಗ ಪಕ್ಕದ ಮನೆಯ ಕುಡೆಂಬಿ ಗುಡ್ಡಪ್ಪ ರವರ ತೋಟದ ಕೆರೆಯಲ್ಲಿ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದಾರೆ.ಇವರು ರಾತ್ರಿ
ಕಾಲು ಜಾರಿ ಕೆರೆಗೆ ಬಿದ್ದಿರಬಹುದೇ ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಹಬ್ಬಿದೆ.
ಸ್ಥಳಕ್ಕೆ ಸುಳ್ಯ ಪೋಲಿಸರು ಆಗಮಿಸಿ ಮಹಜರು ನಡೆಸಿ ಶವವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಪೋಸ್ಟ್ ಮಾರ್ಟಂ ಮಾಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ಓರ್ವ ಪುತ್ರ 2 ನೇ ತರಗತಿ ತನುಷ್ ಮತ್ತು 3 ವರ್ಷದ ಹೆಣ್ಣು ಮಗು ವೀಕ್ಷಾ ಹಾಗೂ ಬಂಧು ವರ್ಗದವರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.

