ಮಳೆಗೆ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಸರಣಿ ಅಪಘಾತ,9 ವಾಹನಗಳಿಗೆ ಹಾನಿ..!

ಮಳೆಗೆ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಸರಣಿ ಅಪಘಾತ,9 ವಾಹನಗಳಿಗೆ ಹಾನಿ..!

ಮಂಗಳೂರು:ಮಂಗಳೂರು ಹೊರವಲಯದ ರಾ.ಹೆ.66ರ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಸೋಮವಾರ ಸಂಜೆ ಸರಣಿ ಅಪಘಾತ ಸಂಭವಿಸಿದೆ.
ಸರಣಿ ಅಪಘಾತದಲ್ಲಿ, ಬಸ್ಸ್, ನಾಲ್ಕು ಕಾರು, ಒಂದು ಲಾರಿ ಮತ್ತು ಆಟೋ ರಿಕ್ಷಾ, 2 ದ್ವಿಚಕ್ರವಾಹಗಳಿಗೆ ಹಾನಿಯಾಗಿವೆ.


ಅದೃಷ್ಟವಶತ್ ಯಾರಿಗೂ ದೊಡ್ಡ ಪ್ರಮಾಣದ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.
ನಿರಂತರವಾಗಿ ಸುರಿದ ಮಳೆಯಿಂದಾಗಿ ಚಾಲಕರ ನಿಯಂತ್ರಣ ತಪ್ಪಿ ಈ ಸರಣಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಸರಣಿ ಅಪಘಾತದಿಂದ ನೇತ್ರಾವತಿ ಸೇತುವೆ ಯುದ್ದಕ್ಕೂ ರಸ್ತೆ ಬ್ಲಾಕ್ ಆಗಿದ್ದು ವಾಹನ ಸವಾರರು ಪರದಾಟ ನಡೆಸಬೇಕಾಯಿತು. ಮಾಹಿತಿ ಪಡೆದ ಸ್ಥಳಿಯ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಸಂಚಾರ ದಟ್ಟಣೆ ನಿವಾರಿಸಲು ಪ್ರಯತ್ನಿದರು.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ರಾಜ್ಯ