ಸುಳ್ಯದ 52 ನೇ ವರ್ಷದ ಶಾರದಾಂಭ ಉತ್ಸವಕ್ಕೆ ವೀರಕೇಸರಿ ತಂಡದಿಂದ ಟ್ಯಾಬ್ಲೋ : ಕಾಯರ್ತೋಡಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ.

ಸುಳ್ಯದ 52 ನೇ ವರ್ಷದ ಶಾರದಾಂಭ ಉತ್ಸವಕ್ಕೆ ವೀರಕೇಸರಿ ತಂಡದಿಂದ ಟ್ಯಾಬ್ಲೋ : ಕಾಯರ್ತೋಡಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ.

ಸುಳ್ಯದ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಹಾಗೂ ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ ಸಮಿತಿ ವತಿಯಿಂದ ನಡೆಸಲ್ಪಡುತ್ತಿರುವ 52ನೇ ವರ್ಷದ ಶಾರದಾಂಬಾ ಉತ್ಸವ ಸುಳ್ಯ ದಸರಾದ ಶೋಭಾಯಾತ್ರೆಯಲ್ಲಿ ಕಳೆದ 17 ವರ್ಷಗಳಿಂದ ಟ್ಯಾಬ್ಲೂ ಪ್ರದರ್ಶನ ಹಾಗೂ ಸಿಡಿಮದ್ದು ಪ್ರದರ್ಶನ ನೀಡುತ್ತಿರುವ ವೀರಕೇಸರಿ ವಿಷ್ಣು ಸರ್ಕಲ್‌ನ ವತಿಯಿಂದ ಈ ಭಾರಿ 18ನೇ ವರ್ಷದ ಟ್ಯಾಬ್ಲೋ ಹಾಗೂ ಸಿಡಿಮದ್ದು ಪ್ರದರ್ಶನ ನಡೆಸಲು ತಯಾರಿ ನಡೆಸಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಇಂದು ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಸಲಾಯಿತು ಈ ಸಂದರ್ಭದಲ್ಲಿ ವೀರಕೇಸರಿ ತಂಡದ ಗೌರವಾಧ್ಯಕ್ಷ ಕೆ.ಗೋಕುಲ್‌ದಾಸ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಮಿತಿಯ ಕಾರ್ಯದರ್ಶಿ ಮೋಹನ್‌ದಾಸ್ ಪಂಜ, ಉಪಾಧ್ಯಕ್ಷ ದೀಪಕ್.ಪಿ.ಎಸ್, ಅನಿಲ್‌.ಕೆ.ಸಿ, ಕಾಯರ್ತೋಡಿ ದೇವಾಲಯದ ಪುರೋಹಿತ ನೀಲಕಂಠ, ಸಮಿತಿಯ ಪದಾಧಿಕಾರಿಗಳಾದ ಬಾಲಕೃಷ್ಣ, ಮಿಥುನ್, ಕಿರಣ್ ಕುಮಾರ್, ಮನಮೋಹನ್, ಸಂದೇಶ್ ಕಾಯರ್ತೋಡಿ, ಪ್ರಶಾಂತ್ ಕುಕ್ಕುಜಡ್ಕ, ಕಾರ್ತಿಕ್ ಮೊದಲಾದವರಿದ್ದರು .

ರಾಜ್ಯ