
ಸುಳ್ಯ ಸಮೀಪ ಐವತ್ತೊಕ್ಲು ಗ್ರಾಮದ ಕುಳ್ಳಕೋಡಿ ಎಂಬಲ್ಲಿ 5 ಜಾನುವಾರುಗಳ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದು ರಸ್ತೆಯಲ್ಲಿ ಬಾಕಿಯಾದ ಕಾರಣ ಪೋಲಿಸರಿಗೆ ಸುಲಭವಾಗಿ ಸೆರೆ ಸಿಕ್ಕ ಘಟನೆ ವರದಿಯಾಗಿದೆ. ಪಿಕಪ್ ನಲ್ಲಿ ಇದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ವಿಷಯ ತಿಳಿದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಾನುವಾರುಗಳಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ರೂ 20,000/- ಮೌಲ್ಯದ ಜಾನುವಾರುಗಳನ್ನು ಹಾಗೂ ಅಂದಾಜು ರೂ 2,00,000/ ಮೌಲ್ಯದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ : 69/2023 ಕಲಂ: 379 ಐಪಿಸಿ ಮತ್ತು ಕಲಂ: 5,6,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ಯಂತೆ ಪ್ರಕರಣ ದಾಖಲಾಗಿದೆ

