ಕನ್ನಡದಲ್ಲಿ ಕಮಾಲ್ ಮಾಡಲು ಬರುತ್ತಿದೆ ಮತ್ತೊಂದು ಕರಾವಳಿಗರ ಚಿತ್ರ “ರವಿಕೆ ಪ್ರಸಂಗ”

ಕನ್ನಡದಲ್ಲಿ ಕಮಾಲ್ ಮಾಡಲು ಬರುತ್ತಿದೆ ಮತ್ತೊಂದು ಕರಾವಳಿಗರ ಚಿತ್ರ “ರವಿಕೆ ಪ್ರಸಂಗ”

ಹೌದು ಇದೀಗ ಕನ್ನಡಾ ಸಿನಿಮಾ ಇಂಡಸ್ಟ್ರೀಸ್ ನಲ್ಲಿ ಸದ್ದು ಮಾಡುತ್ತಿರುವ ಚಿತ್ರ ಬಹುಪಾಲು ಕರಾವಳಿಗರದ್ದೇ.ಚಾರ್ಲಿ777, ಗರುಡಗಮನ ವೃಷಭ ವಾಹನ, ಕಾಂತಾರ, ಟೋಬಿ ಹೀಗೆ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರ ರಂಗಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ಕರಾವಳಿಗರದ್ದು, ಒಂದು ಕಾಲದಲ್ಲಿ ಸಿನಿಮಾ ಸಕ್ಸ್ಸಸ್ ಬಿಡಿ ಸಿನಿಮಾ ಬಿಡುಗಡೆಗೂ ಕರಾವಳಿಯವರು ಕಷ್ಟ ಪಡಬೇಕಾದ ದಿನಗಳಿತ್ತು ..ಆದರೆ ಈಗ ಹಾಗಿಲ್ಲ..ದುನಿಯಾ ಸಂಪೂರ್ಣ ಉಲ್ಟಾ ಆಗಿದೆ..ದಕ್ಷಿಣ ಕನ್ನಡದವರ ನೈಜ್ಯ ಅಭಿನಯದ ಕನ್ನಡ ಸಿನಿಮಾ ಪ್ರೇಕ್ಷಕರ ಮನ ಮಾತ್ರವಲ್ಲದೆ ದೇಶ ವಿದೇಶಿಗರ ಮನಗೆದ್ದಿದೆ, ಇದೀಗ ಇದೇ ಕರಾವಳಿಯ ಸುಳ್ಯದ ಪ್ರತಿಭಾನ್ವಿತ ಚಿತ್ರ ನಿರ್ಧೇಶಕ ಸಂತೋಷ್ ಕೊಡೆಂಕೇರಿ ನಿರ್ಮಾಣದಲ್ಲಿ ತಯಾರಾದ ಅದ್ಬುತವಾಗಿ ಮೂಡಿ ಬಂದಿರುವ “ರವಿಕೆ ಪ್ರಸಂಗ” ಶೀಘ್ರವೇ ತರೆಗೆ ಅಪ್ಪಳಿಸಲಿದೆ, ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆನಪಿಟ್ಟು ಕೊಳ್ಳುವಂತಹ ಸಿನಿಮಾ ಇದಾಗಿದ್ದು, ಕುಟುಂಬ ಸಮೇತರಾಗಿ ಥಿಯೇಟರ್ ನಲ್ಲಿ ಕುಳಿತು ನೂಡಬಹುದಾದ ಸಿನಿಮಾ, “ರವಿಕೆ ಪ್ರಸಂಗ” ಗೀತಾ ಭಾರತಿ ಅದ್ಭುತವಾಗಿ ಅಭಿನಯಿಸಿದ್ದಾರೆ.

ಕೇವಲ ಶೀರ್ಷಿಕೆಯಿಂದಾಗಿಯೇ ಕುತೂಹಲ ಹುಟ್ಟಿಸಿರುವ ‘ರವಿಕೆ ಪ್ರಸಂಗ’ ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ, ಇದರ ಟ್ರೈಲರ್ ವೀಕ್ಷಿಸಿರುವ ಸಿನಿಮಾ ರಂಗದ ದಿಗ್ಗಜರು ಸಿನಿಮಾಟೊಗ್ರಫಿಗೆ ತಲೆದೂಗಿದ್ದಾರೆ.

ನಿರ್ಮಾಪಕ ಮತ್ತು ನಿರ್ದೇಶಕರು ಸುಳ್ಯದವರೇ ಆದ ಸಂತೋಷ್ ಕೊಡೆಂಕಿರಿ. ಅವರ ಪತ್ನಿ‌ ಶ್ರೀಮತಿ ಪಾವನಾ ಸಂತೋಷ್ ಅವರ ಕಥೆಗೆ ಚಿತ್ರಕಥೆ ಬರೆದಿದ್ದು, ಈ ಬಗ್ಗೆ
ಸಂತೋಷ್ ಹಾಗೂ ಪಾವನಾ ದಂಪತಿ‌ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿ ನಡೆಸಿ, ತಮ್ಮ ಸಿನೆಮಾ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಕೊಡೆಂಕಿರಿ ಇದೊಂದು ವಿಶಿಷ್ಟ ಹಾಗೂ ಸೂಕ್ಷ್ಮ ಕಥಾ ಹಂದರದ ಚಿತ್ರ. ಕಿರಣ್ ಕಾವೇರಪ್ಪ ರವಿಕೆ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ‌‌. ಅಷ್ಟೇ ಚೆನ್ನಾಗಿ ಚೈತ್ರ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ವಿನಯ್ ಶರ್ಮಾ ಸಂಗೀತದಲ್ಲಿ ಎಲ್ಲಾ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಹಲವು ಖ್ಯಾತ ನಟ, ನಟಿಯರು ಅಭಿನಯಿಸಿದ್ದಾರೆ. ಇಡೀ ಚಿತ್ರ ಪೂರ್ಣ ಸಿದ್ಧಗೊಂಡಿದ್ದು, ಶೀಘ್ರವೇ ತೆರೆ ಕಾಣಲಿದೆ ಎಂದರು.
ಪಾವನ ಸಂತೋಷ್ ಮಾತನಾಡಿ,ಕೆಲವೊಂದು ನೈಜ್ಯ ಘಟನೆ ಆಧಾರಿಸಿ ಕಥೆ ಬರೆಯಲಾಗಿದೆ. ಹೆಣ್ಣುಮಕ್ಕಳಿಗೆ ಸೀರೆಗಿಂತ ಹೆಚ್ಚಿನ ಪ್ರೀತಿ ರವಿಕೆ ಮೇಲಿರುತ್ತದೆ. ಆ ರವಿಕೆ ಕುರಿತು ಕಥೆ ಬರೆದಿದ್ದೇನೆ. ಸಹಕಾರ ನೀಡಿದ ನನ್ನ ಪತಿ ಸಂತೋಷ್ ಹಾಗೂ ಇಡೀ ಚಿತ್ರತಂಡಕ್ಕೆ ನಾನು ಆಭಾರಿ ಎಂದರು.


ಗೀತಾ ಭಾರತಿ, ಪದ್ಮಜಾ ರಾವ್ ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುಮನ್ ರಂಗನಾಥ್,, ರಘು ಪಾಂಡೇಶ್ವರ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದು, ಸುಳ್ಯದ ಕೆಲವು ಪ್ರತಿಭಾನ್ವಿತರು ಕೂಡಾ ಇದರಲ್ಲಿ ನಟಿಸಿದ್ದಾರೆ ಎಂದು ಅವರು ತಿಳಿಸಿದರು.

ಸಂತೋಷ್ ಕೊಡೆಂಕಿರಿಯವರು ಇದೇ ಸಂದರ್ಭದಲ್ಲಿ ತನ್ನ ” ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ” ಸಿನೆಮಾ ಕುರಿತು ಕೂಡಾ ಮಾಹಿತಿ ನೀಡಿದರು.

ಸಂತೋಷ್ ಅವರ ತಂದೆ ಬಾಲಕೃಷ್ಣ ಭಟ್ ಕೊಡಂಕಿರಿ, ಚಿತ್ರದ ಸಹ ನಿರ್ಮಾಪಕ‌ ಶಿವರುದ್ರಯ್ಯ ಪತ್ರಿಕಾಗೋಷ್ಠಿಯಲ್ಲಿದ್ದರು.

ರಾಜ್ಯ