
ಪೆರಾಜೆ ಪ್ರೌಢ ಶಾಲೆಯಲ್ಲಿ ವ್ಯಾಸಂಗಕ್ಕೆಂದು ಬಂದು ಹಾಸ್ಟೆಲ್ ನಲ್ಲಿದ್ದು ವಿದ್ಯಾಭ್ಯಾಸ ಪಡೆಯುತ್ತಿದ್ದ ಮೂವರು ಬಾಲಕರು ಶನಿವಾರ ಹಾಸ್ಟೆಲ್ ನಿಂದ ಶಾಲೆಗೆಂದು ಹೋದವರು ಶಾಲೆಗೆ ತೆರಳದೆ ನಾಪತ್ತೆಯಾಗಿದ್ದವರು ಇದೀಗ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಕರು ನಾಪತ್ತೆಯಾದ ಬಗ್ಗೆ ಶನಿವಾರ ಮದ್ಯಾಹ್ನದ ವೇಳೆಗೆ ಹಾಸ್ಟೆಲ್ ವಾರ್ಡನ್ ಗಮನಕ್ಕೆ ಬಂದು ಅವರು ಸಂಪಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದರು, ನಾಪತ್ತೆಯಾದ ಬಾಲಕರ ಪತ್ತೆಗೆ ಪೋಲಿಸರು ಎಲ್ಲಾ ಠಾಣೆಗಳಿಗೆ ನಾಪತ್ತೆಯಾದ ಬಾಲಕರ ವಿವರ ಕಳುಹಿಸಿದ್ದರು, ಈ ಹಿನ್ನಲೆಯಲ್ಲಿ ಬೆಂಗಳೂರಿನ ಪೋಲಿಸರು ಶೋಧ ಕಾರ್ಯ ನಡೆಸಿ ಬೆಂಗಳೂರಿನಲ್ಲಿ ಪತ್ತೆ ಮಾಡಿದ್ದಾರೆ, ನಾಪತ್ತೆಯಾದ ಬಾಲಕರಲ್ಲಿ ಬೇಲೂರು ಮೂಲದ 8 ನೇ ತರಗತಿ ಬಾಲಕ ಮತ್ತು ಸುಳ್ಯ ಹಾಗೂ ಪೆರಾಜೆ ಗ್ರಾಮದ 10 ನೇ ತರಗತಿಯ ಇಬ್ಬರು ಬಾಲಕರು ಜೊತೆಯಾಗಿ ಬೆಂಗಳೂರಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.ಮಕ್ಕಳ ಪೋಷಕರು ಹಾಸ್ಟೆಲ್ ಅಧಿಕಾರಿ ಮಕ್ಕಳನ್ನು ಕರೆದುಕೊಂಡು ಬರಲು ಬೆಂಗಳೂರು ತಿಳಿದುಬಂದಿದೆ.ಹೆಚ್ಚಿನ ವಿವರ ತಿಳಿದು ಬರಬೇಕಿದೆ.
