ಅಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ ಸುಳ್ಯದ ವ್ಯಕ್ತಿಯ ಬಂಧನ.

ಅಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ ಸುಳ್ಯದ ವ್ಯಕ್ತಿಯ ಬಂಧನ.

ಅಟೋರಿಕ್ಷಾವೊಂದರಲ್ಲಿ ಅಕ್ರಮವಾಗಿ ನಿಷೇದಿತ ಮಾದಕ ವಸ್ತುವಾದ ಗಾಂಜಾ ಸಾಗಾಟ ಮಾಡುತ್ತಿದ್ದ ಕಾರಣಕ್ಕೆ ಸುಳ್ಯದ ವ್ಯಕ್ತಿಯನ್ನು ಅಟೊರಿಕ್ಷಾ ಹಾಗೂ 6 ಕೆ ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಸೆ.16 ರಂದು ವಿಟ್ಲ ಸಮೀಪ ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ, KA-21-B-7248 ನಂಬರಿನ ಅಟೋರಿಕ್ಷಾವೊಂದರಲ್ಲಿ ಅದರ ಚಾಲಕ ಆರೋಪಿ ಸುಳ್ಯ ಕಸಬಾ ಗ್ರಾಮ ಸುಳ್ಯ ನಿವಾಸಿಯಾದ ಎನ್‌ ಎಂ ಮಹಮ್ಮದ್‌ ಕಲಂದರ್‌ ಶಾ (36) ಎಂಬಾತನು, ಯಾವುದೇ ಪರವಾನಿಗೆ ಇಲ್ಲದೇ ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ನಿಷೇದಿತ ಮಾದಕ ವಸ್ತುವಾದ ಗಾಂಜಾ ಸಾಗಿಸುತ್ತಿರುವುದನ್ನು ವಿಟ್ಲ ಠಾಣಾ ಪೊಲೀಸರು ಪತ್ತೆಹಚ್ಚಿರುತ್ತಾರೆ. ಆರೋಪಿಯನ್ನು ಹಾಗೂ ರಿಕ್ಷಾದಲ್ಲಿದ್ದ 6.110 ಕೆ ಜಿ ತೂಕದ ಗಾಂಜಾ ಅಂದಾಜು ಮೌಲ್ಯ 1,35,000/- ರೂಪಾಯಿ, ಎರಡು ಮೊಬೈಲ್‌ ಫೊನ್‌ (ಅಂದಾಜು ಮೌಲ್ಯ 1000/-ರೂ) ಹಾಗೂ 900/- ರೂಪಾಯಿ ನಗದು, ಚಾಲಕನ ಚಾಲನಾ ಪರವಾನಿಗೆ, 1,60,000/- ರೂ ಅಂದಾಜು ಮೌಲ್ಯದ ಅಟೋರಿಕ್ಷಾ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾದೀನಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 2,96,900/- ರೂಪಾಯಿ ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 162/2023 ಲಂ; 8(c),20(b) (ii) (B) ,NDPS ACT,ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ರಾಜ್ಯ