
ಸುಳ್ಯ:ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ವಿದ್ದರೂ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿಯವರನ್ನು ನೇಮಿಸಿದ ಸರ್ಕಾರ..ಆದೇಶವನ್ನು ಹೊರಡಿಸಿದ್ದು ಆದೇಶ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು , ಕಾಗೆ ಗೂಡಲ್ಲಿ ಕೋಗಿಲೆ ಮರಿಗಳು ಎಂದು ನೆಟ್ಟಿಗರು ಕುಟುಕಿದ್ದಾರೆ,
ಹೌದು..
ಸುಳ್ಯ ವಿಧಾನ ಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ (ಅಕ್ರಮ ಸಕ್ರಮ ಸಮಿತಿ)ಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.ಆದರೆ ಸರ್ಕಾರ ಸೂಚಿಸಿದ ಅಧಿಸೂಚನೆ ಈಗ ಗೊಂದಲಕ್ಕೆ ಕಾರಣವಾಗಿದೆ. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಅರಂತೋಡಿನ ಭಾರತಿ ಪುರುಷೋತ್ತಮ ಉಳುವಾರು, ವಕೀಲ ಜಗದೀಶ್ ಡಿ.ಪಿ. ಅವರನ್ನು ನೇಮಿಸಲಾಗಿದೆ. ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿ ಸದಸ್ಯರು ನೇಮಕಗೊಂಡ ಆದೇಶ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದರೂ ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿಗೆ ಕಾಂಗ್ರೆಸಿಗರನ್ನು ನೇಮಕ ಮಾಡದೇ ಇರುವುದು ಕಾಂಗ್ರೆಸ್ ನಾಯಕರಿಗೆ ತೀವ್ರ ಮುಜುಗರಕ್ಕೀಡಾಗುವಂತಾಗಿದೆ. ಈ ವಿಷಯ ಕಾಂಗ್ರೆಸ್ ಮುಖಂಡರ ಗಮನಕ್ಕೆ ಬರುತ್ತಿದ್ದಂತೆ ಆದೇಶಕ್ಕೆ ತಡೆ ಹಿಡಿದು ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಲು ಮನವಿ ಮಾಡಿದ್ದಾರೆ ಈ ಮಧ್ಯೆ ಇದಕ್ಕೆಲ್ಲ ಸುಳ್ಯ ಕಾಂಗ್ರೇಸ್ ನಲ್ಲಿರುವ ಒಳ ಬೇಗುದಿಯೇ ಇದಕೆಲ್ಲಾ ಕಾರಣ ಎಂದು ಹೇಳಲಾಗಿದೆ.

