ಮಿತ್ರ ವೃಂದ ಬಾಂಜಿಕೋಡಿ ಇದರ ವತಿಯಿಂದ 8ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ.

ಮಿತ್ರ ವೃಂದ ಬಾಂಜಿಕೋಡಿ ಇದರ ವತಿಯಿಂದ 8ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ.

ಮಿತ್ರ ವೃಂದ ಬಾಂಜಿಕೋಡಿ ಇದರ ವತಿಯಿಂದ 8ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ದಿನಾಂಕ 10.09.2023 ರಂದು ಬಾಂಜಿಕೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯಿಂದ ನಡೆಯಿತು.


ನಿವೃತ್ತ ಪ್ರಾಧ್ಯಾಪಕರಾದ ನಾರಾಯಣ ಸ್ವಾಮಿ ಮಾಸ್ತರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ ಕುತ್ಯಾಡಿ , ಗ್ರಾ.ಪ. ಸದಸ್ಯರಾದ ರಂಜನ್ ಮೂಲೆತೋಟ, ಅಂಗನವಾಡಿ ಶಿಕ್ಷಕಿ ಜಯಶೀಲ ಮಡ್ತಿಲ, ಮಹಾಬಲ ಗುಂಪಕಲ್, ಚರಣ್ ಬೇಂಗಮಲೆ ಉಪಸ್ಥಿತರಿದ್ದರು.

ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ ಊರವರಿಗೆ ಮತ್ತು ಸಾರ್ವಜನಿಕರಿಗೆ ಹಗ್ಗ ಜಗ್ಗಾಟ,ಮಡಕೆ ಒಡೆಯುವುದು, ಗೋಣಿಚೀಲ ಓಟ, ಲಿಂಬೆ ಚಮಚ ಓಟ, ಬಾಟಲಿಗೆ ನೀರು ತುಂಬಿಸುವುದು,ಆನೆಗೆ ಬಾಲ ಬಿಡಿಸುವುದು,ಲಕ್ಕಿ ಗೇಮ್ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

ಮದ್ಯಾಹ್ನ ರುಚಿಕರವಾದ ಊಟದ ವ್ಯವಸ್ಥೆಯು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಮದ್ಯಾಹ್ನದ ನಂತರ ನಡೆದ ಹಗ್ಗಜಗ್ಗಾಟ ಸ್ಪರ್ಧೆಯು ರೋಚಕವಾಗಿತ್ತು.


ಸಂಜೆ ನಡೆದ ಸಮಾರೋಪ ಸಮಾರಂಭದ ಅತಿಥಿ ಸ್ಥಾನದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಲಿಂಗಂ ರವರು ಮಾತನಾಡಿದರು. ಭವಾನಿ ಬಾಂಜಿಕೋಡಿ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಐವರ್ನಾಡು, ಹಾಗೂ ನವೀನ್ ಬಾಂಜಿಕೋಡಿ   ಇವರ ಅತ್ಯದ್ಭುತವಾದ  ನಿರೂಪಣೆ ಎಲ್ಲರ ಗಮನ ಸೆಳೆಯಿತು.

Uncategorized ರಾಜ್ಯ