ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಇಂದು ಭಾರತ ತಂಡವನ್ನು ಪ್ರಕಟಿಸಾಗಿದೆ.


ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ತಮ್ಮ ವಿಶ್ವಕಪ್ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ಪಾಲ್ಗೊಳ್ಳಲು ಸೂಕ್ತವೆಂದು ಪರಿಗಣಿಸಲ್ಪಟ್ಟಿರುವ ಕನ್ನಡಿಗ ಕೆಎಲ್ ರಾಹುಲ್ ತಂಡದಲ್ಲಿ ತನ್ನ ಸ್ಥಾನ ಪಡೆದು ಕೊಂಡಿರುವುದು ಬಹುಶಃ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿಯಾಗಿದೆ. ನಿರಂತರ ಫಿಟ್ನೆಸ್ ಟೆಸ್ಟ್ ವೈಫಲ್ಯದಿಂದ ಏಷ್ಯಾ ಕಪ್ ತಂಡದಿಂದ ಕೂಡ ಕೊನೆ ಕ್ಷಣದಲ್ಲಿ ಹೊರಗೆ ಹೋಗಿದ್ದರು. ಆದರೆ ಈ ವಿಶ್ವಕಪ್ ತಂಡದಲ್ಲಿಯೂ ಸ್ಪೆಷಲಿಸ್ಟ್ ಸ್ಪೀನ್ನರ್ ಯಾಜುವೇಂದ್ರ ಚಹಾಲ್ ಸ್ಥಾನ ಪಡೆಯದಿರುವುದು ಅಚ್ಚರಿ ಮೂಡಿಸಿದೆ, ಜೊತೆಗೆ ಮೊದಲಿನಂತೆಯೇ ಈ ಬಾರಿ ಕೂಡ ಸಂಜು ವಿ ಸ್ಯಾಮ್ಸನ್ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಪ್ರಕಟಗೊಂಡ ಏಕದಿನ ವಿಶ್ವಕಪ್ ಇಂತಿದೆ, ರೋಹಿತ್ ಶರ್ಮಾ (ನಾಯಕ ), ಹಾರ್ದಿಕ್ ಪಾಂಡ್ಯ (ಉಪನಾಯಕ ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಅಕ್ಸರ್ ಪಟೇಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ .
ವರದಿ : ಫಾರೂಕ್ ಕಾನಕ್ಕೋಡ್