ಕುಡಿದ ಮತ್ತಿನಲ್ಲಿ ತಂದೆ ತಾಯಿಯನ್ನು ಕೊಂದ ಪಾಪಿ ಮಗ:

ಕುಡಿದ ಮತ್ತಿನಲ್ಲಿ ತಂದೆ ತಾಯಿಯನ್ನು ಕೊಂದ ಪಾಪಿ ಮಗ:

ಮಂಗಳೂರು: ಕುಡಿದ ಮತ್ತಿನಲ್ಲಿ ತನ್ನ ತಂದೆ,
ತಾಯಿಯನ್ನು ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ
ಆಘಾತಕಾರಿ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಮಂಗಳೂರು ಮೂಲದ
ಭಾಸ್ಕರ್(64) ಹಾಗೂ ಕೇಂದ್ರ ಸರ್ಕಾರಿ ನಿವೃತ್ತ
ಉದ್ಯೋಗಿ ಶಾಂತಾ(60) ಎಂದು ಗುರುತಿಸಲಾಗಿದೆ.

ಮಂಗಳೂರು ಮೂಲದ ಈ ಕುಟುಂಬಬೆಂಗಳೂರಿನಲ್ಲಿ
ನೆಲೆಸಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದು ಹಿರಿಯ ಮಗ
ಖಾಸಗಿ ಕಂಪನಿಯನ್ನು ಉದ್ಯೋಗ ಮಾಡಿ ಕೊಂಡಿದ್ದಾನೆ. 2ನೇಯವನು ಆರೋಪಿ ಶರತ್ (27) ಎಂದು ಗುರುತಿಸಲಾಗಿದೆ. ಘಟನೆಯ ನಂತರ ಆರೋಪಿ ಶರತ್ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಮುಂದುವರೆದಿದೆ

ಬೆಳಗ್ಗೆ ಉದ್ಯೋಗಕ್ಕೆ ತೆರಳಿದ್ದ ಹಿರಿಯ ಮಗ ತಂದೆ-
ತಾಯಿಗೆ ಕರೆ ಮಾಡಿದ್ದಾನೆ. ಯಾರೂ ಫೋನ್ ರಿಸೀವ್
ಮಾಡದಿದ್ದಾಗ ಪಕ್ಕದ ಮನೆಯವರಿಗೆ ಕರೆ ಮಾಡಿ
ಪೋಷಕರ ಬಗ್ಗೆ ವಿಚಾರಿಸಿದ್ದಾನೆ. ಪಕ್ಕದ ಮನೆಯವರು
ಬಂದು ನೋಡಿದಾಗ ಕೊಲೆ ನಡೆದಿರೋದು ಬೆಳಕಿಗೆ
ಬಂದಿದೆ. ಶರತ್ ಮಾನಸಿಕವಾಗಿ ನೊಂದಿದ್ದು,
ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. 20
ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಶರತ್
ಮನೆಯಲ್ಲಿಯೇ ಇರುತ್ತಿದ್ದನು. ಯಾವಾಗಲೂ
ಕೆಲಸವಿಲ್ಲದೇ ಮನೆಯಲ್ಲಿರುತ್ತಿದ್ದ ಶರತ್ ವರ್ತನೆ ಸೈಕೋ ರೀತಿಯಲ್ಲಿತ್ತು ಎಂದು ತಿಳಿದು ಬಂದಿದೆ.

ರಾಜ್ಯ