ಸುಂಟಿಕೊಪ್ಪ : ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ.

ಸುಂಟಿಕೊಪ್ಪ : ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ.

ಸುಂಟಿಕೊಪ್ಪ ಜೂ.24 : ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆಯೊಂದು ದಾಳಿ ನಡೆಸಿರುವ ಘಟನೆ ಸುಂಟಿ ಕೊಪ್ಪದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಮತ್ತಿಕಾಡುವಿನ ಕಾಫಿಬೆಳೆಗಾರ ಕೋರನ ಟಿಪ್ಪು ಎಂಬವರು ಕಾರಿನಲ್ಲಿ ಪತ್ನಿಯೊಂದಿಗೆ ಮನೆಗೆ ತೆರಳುತ್ತಿದ್ದಾಗ ಕುಟ್ಟೇಟಿ ತೋಟದ ಲೈನ್ ಮನೆಯ ಸಮೀಪ ಕಾಡಾನೆಯೊಂದು ದಾಳಿನಡೆಸಿದ್ದು, ಟಿಪ್ಪು ಮತ್ತು ಅವರ ಪತ್ನಿ ಕಾರಿನಿಂದ ಇಳಿದು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.
ಕಾಡಾನೆ ಕಾರಿನ ಮುಂಭಾಗದ ಬಾನೆಟ್‌ಗೆ ದಂತದಿಂದ ಗುದ್ದಿ ಹಾನಿಗೊಳಿಸಿದ್ದು, ಸಾವಿರಾರು ರೂ ನಷ್ಟ ವುಂಟಾಗಿದೆ ಎನ್ನಲಾಗಿದೆ.‌ಮತ್ತಿಕಾಡು ವ್ಯಾಪ್ತಿಯಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಚರಣೆ ನಡೆಸಲಾಗುತ್ತಿದೆ.

ರಾಜ್ಯ