
ಮಕ್ಕಳಿಂದ ಶೋಷಣೆಗೆ ಒಳಗಾದ 81 ವರ್ಷ ಪ್ರಾಯದ ವಯೋವೃದ್ದರು ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಕಂಡುಬಂದಿದ್ದು ಕಳೆದ ಎಂಟು ದಿನಗಳ ಹಿಂದೆ ಬೆಂಗಳೂರು ಕತ್ರಿಗುಪ್ಪೆಯಿಂದ ಮನೆಬಿಟ್ಟು ಬಂದು ರಾಜ್ಯದ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ತಿರುಗಾಡುತ್ತಿದ್ದು, ಇದೀಗ ಪೋಲಿಸರ ಸಮಕ್ಷಮದಲ್ಲಿ ಸಮಾಜಸೇವಕರ ಸುಪರ್ದಿಯಲ್ಲಿದ್ದಾರೆ.


ಬೆಂಗಳೂರಿನಿಂದ ನೇರ ತಲುಪಿದ್ದು ಕುಕ್ಕೆ ಸುಬ್ರಹ್ಮಣ್ಯಕ್ಕೆ.
ಇಂದು ದೇವಸ್ಥಾನದ ಪರಿಸರದಲ್ಲಿ ಕಂಡುಬಂದ ಇವರನ್ನು ವಿಚಾರಿಸಿದಾಗ ತನ್ನ ಹೆಸರು ಭಕ್ತವತ್ಸಲ ನನಗೆ 81ವರ್ಷ ಪ್ರಾಯ, ಭಾರತೀಯ ಆರ್ಮಿ ಯಲ್ಲಿ
1965 ರಿಂದ 68.ರಲ್ಲಿ ಮೂರು ವರ್ಷಗಳ ಕಾಲ ಕರ್ತವ್ಯ ಮಾಡಿದ್ದೇನೆ, ಮನೆಯವರಿಗಾಗಿ ಕೆಲಸವನ್ನು ಅರ್ದದಲ್ಲಿ ಬಿಡಬೇಕಾಗಿ ಬಂದು ನಂತರ ಅನೇಕ ಕಂಪನಿಗಳಲ್ಲಿ ದುಡಿದಿದ್ದೇನೆ,
.ಇಬ್ಬರು ಗಂಡು ಮಕ್ಕಳು.ಇದ್ದಾರೆ ಇಬ್ಬರಿಗೂ ಮದುವೆ ಆಗಿದೆ,ಒಬ್ಬ ಪುರೋಹಿತ,ಎರಡನೇ ಮಗ ಡ್ರೈವರ್
ಇಬ್ಬರು ಮಕ್ಕಳಿಗೆ ಅಸ್ತಿಯನ್ನು ಬರೆದು ಕೊಟ್ಟಿದ್ದೇನೆ.. ಇವಾಗ ಏನೂ ಇಲ್ಲ.ನನ್ನ ಎರಡನೇ ಮಗನ ಹೆಂಡತಿ ನನಗೆ ತೊಂದರೆ ಮಾಡುತಿದ್ದರೆ ಅವರುಹೇಳಿದ ಹಾಗೆ ಕೇಳಬೇಕು ಹೇಳುತ್ತಾರೆ, ಅದು ನನಗೆ ಇಷ್ಟ ಇಲ್ಲ ಅದಕ್ಕೆ ಮನೆಬಿಟ್ಟು ಇಲ್ಲಿಗೆ ಬಂದೆ ,ಇಲ್ಲಿ ಊಟ ಸಿಕ್ರೆ ಕೊಡಿ ಇಲ್ಲಾಂದ್ರೆ ಬೇಡ ಎನ್ನುತ್ತಾರೆ ಈ ಹಿರಿ ಜೀವ . ಹಗಲಿಡೀ ಸುತ್ತಾಡುತ್ತಿದ್ದ ಇವರನ್ನು ಗಮನಿಸಿದ ಸ್ಥಳೀಯರು ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಅವರ ಗಮನಕ್ಕೆ ತಂದಿದ್ದಾರೆ ಹಾಗೂ ವಿಷಯ ತಿಳಿದು ರವಿಕಕ್ಕೇಪದವು ಸಮಾಜಸೇವಕ ಟ್ರಸ್ಟ್ ವತಿಯಿಂದ ರಕ್ಷಣೆ ಮಾಡಿ ಅವರ ಮಕ್ಕಳಿಗೆ ಫೋನ್ ಮಾಡಿ ತಂದೆಯನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ.

ಆದರೇ ವೃದ್ದ ಭಕ್ತವತ್ಸಲ ಮನೆಗೆ ತೆರಳಲು ನಿರಾಕರಿಸಿದ್ದು ಸೊಸೆಯಿಂದ ಹಿಂಸೆ ಆಗುತ್ತಿದ್ದು, ಮನೆಗೆ ಹೋಗಲು ಮನಸ್ಸಿಲ್ಲ ಇಲ್ಲಿಯೇ ಇರುತ್ತೇನೆ ಎಂದು ಹೇಳುತ್ತಿರುವುದಾಗಿ ತಿಳಿದು ಬಂದಿದೆ.
ಮಾಧ್ಯಮದ ಜೊತೆ ಮಾತಾಡಿದ ಸಮಾಜಸೇವಕ ಡಾ. ರವಿಕಕ್ಕೆಪದವು ಅವರು ತಂದೆ ತಾಯಿ ಮಕ್ಕಳನ್ನು ಪ್ರೀತಿಯಿಂದ ನೋಡಿರುತ್ತಾರೆ ವಯಸ್ಸು ಆದಮೇಲೆ ಮಕ್ಕಳು ತಂದೆ ತಾಯಿಯನ್ನು ನೋಡಿಕೊಳ್ಳಬೇಕು, ಮಕ್ಕಳು ಹಿರಿ ಜೀವದ ನಿರ್ಲ್ಯಕ್ಷದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ವರದಿ : ಶಿವ ಭಟ್ ಸುಬ್ರಹ್ಮಣ್ಯ.
