ನಾಗಪಟ್ಟಣದದಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ.

ನಾಗಪಟ್ಟಣದದಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ.

ಸುಳ್ಯ ಆಲೆಟ್ಟಿಗ್ರಾಮದ ನಾಗಪಟ್ಟಣದಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ .20.ರಂದು ವರದಿಯಾಗಿದೆ. ನಾಗಪಟ್ಟಣದ ನಿವಾಸಿ ಜಾಲ್ಸೂರು ಗೇರು ಬೀಜ ಕಾರ್ಖಾನೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುವಕ ಮಣಿಕಂಠ (29)ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ , ಜಾಲ್ಸೂರಿನಿಂದ ನಿನ್ನೆ ತಡ ರಾತ್ರಿ ಮನೆಗೆ ಬಂದ ಯುವಕ ತಾಯಿಯ ಸೀರೆಯನ್ನು ಹಗ್ಗವನ್ನಾಗಿಸಿ ಮನೆ ಸಮೀಪದ ಮಾವಿನ ಮರಕ್ಕೆ ನೇಣು ಹಾಕಿಕೊಂಡಿದ್ದು ಇಂದು ಬೆಳಿಗ್ಗೆ ಆತನ ಬೈಕ್ ಮನೆ ಎದುರು ನಿಂತಿದ್ದು ಆತನಿಗಾಗಿ ಹುಡುಕಾಡಿದಾಗ ಘಟನೆ ಬೆಳಕಿಗೆ ಬಂದಿದೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಆತ್ಮಹತ್ಯೆಗೂ ಮೊದಲು ನಾಲ್ವರು ಸ್ನೇಹಿತರಿಗೆ ಮೇಸೆಜ್ ಮಾಡಿದ್ದ ಎಂದು ಹೇಳಲಾಗಿದೆ, ಸ್ಥಳಕ್ಕೆ ಸುಳ್ಯ ಪೋಲಿಸರು ಧಾವಿಸಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಮೃತ ಯುವಕ ತಂದೆ, ತಾಯಿ ಹಾಗೂ ಸಹೋದರರನ್ನು ಅಗಲಿದ್ದಾರೆ.

ರಾಜ್ಯ