ಕ್ರೋಶ ಕಲಾವಿದೆ ಪೂರ್ಣಿಮಾ ಕೆ. ಭಟ್‌ಗೆ ‘ಹವ್ಯಕ ಶ್ರೀ’ ಪ್ರಶಸ್ತಿ ಗೌರವ

ಕ್ರೋಶ ಕಲಾವಿದೆ ಪೂರ್ಣಿಮಾ ಕೆ. ಭಟ್‌ಗೆ ‘ಹವ್ಯಕ ಶ್ರೀ’ ಪ್ರಶಸ್ತಿ ಗೌರವ

ಬೆಂಗಳೂರು: ದೈಹಿಕ ಸವಾಲುಗಳನ್ನು ಮೆಟ್ಟಿ ನಿಂತು ಕ್ರೋಶ ಕಲೆಯ ಮೂಲಕ ಅಸಾಧಾರಣ ಸಾಧನೆ ಮಾಡಿರುವ ದಕ್ಷಿಣ ಕನ್ನಡದ ಪೆರಾಬೆ ಮೂಲದ ಕ್ರೋಶ ಕಲಾವಿದೆ ಶ್ರೀಮತಿ ಪೂರ್ಣಿಮಾ ಕೆ. ಭಟ್ ಅವರಿಗೆ ಅಖಿಲ ಹವ್ಯಕ ಮಹಾಸಭಾದ ಪ್ರತಿಷ್ಠಿತ ‘ಹವ್ಯಕ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ಭಾನುವಾರ (ಮಾರ್ಚ್ 29) ಸಂಜೆ ನಡೆದ ಸಂಸ್ಥಾಪನೋತ್ಸವ ಮತ್ತು ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಾಸಭಾದ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಗಾಲಿಕುರ್ಚಿಯಲ್ಲೇ ಕುಳಿತು ತಮ್ಮ ಸೃಜನಶೀಲತೆಯಿಂದ ಸಾಧನೆಯ ಶಿಖರ ಏರಿರುವ ಪೂರ್ಣಿಮಾ ಅವರು, “Crochet on Wheels” ಎಂಬ ಹೆಸರಿನಲ್ಲಿ ವಿಶ್ವದಾದ್ಯಂತ ಕಲಾಭಿಮಾನಿಗಳನ್ನು ಗಳಿಸಿದ್ದಾರೆ. ಅವರ ಅಮಿಗುರುಮಿ ಆಟಿಕೆಗಳು ಮತ್ತು ಆನ್‌ಲೈನ್ ವರ್ಕ್‌ಶಾಪ್‌ಗಳು ಇಂದು ಅನೇಕರಿಗೆ ಮಾದರಿಯಾಗಿವೆ.

ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷರು ಮತ್ತು ಗಣ್ಯರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ಹವ್ಯಕ ಸಮಾಜದ ವಿವಿಧ ಪ್ರತಿಭೆಗಳನ್ನು ಗೌರವಿಸುವ ಮೂಲಕ ನಾಡಿನ ಗಮನ ಸೆಳೆಯಿತು.

Uncategorized