ಕೊಯನಾಡು ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿಯಲ್ಲಿ 77 ನೇ ಗಣರಾಜ್ಯೋತ್ಸವ ದಿನಾಚರಣೆ

ಕೊಯನಾಡು ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿಯಲ್ಲಿ 77 ನೇ ಗಣರಾಜ್ಯೋತ್ಸವ ದಿನಾಚರಣೆ

ಕೊಯನಾಡು: ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿಯಲ್ಲಿ 77 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸುಬುಲು ಸ್ಸಲಾಂ ಮದ್ರಸ ವಠಾರದಲ್ಲಿ ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್ ಮೊಯಿದಿನ್ ಕುಂಞಿ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರದ ಏಕತೆ, ಸಮಾನತೆ, ಸಮಗ್ರತೆ ಮತ್ತು ಸಮೃದ್ಧಿಯನ್ನು ಸಾಧಿಸುವಲ್ಲಿ ಪ್ರಜಾಪ್ರಭುತ್ವದ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತಲೇ ಇರಲಿ. ದೇಶಭಕ್ತಿ ಮತ್ತು ಏಕತೆಯ ಮನೋಭಾವವು ರಾಷ್ಟ್ರದ ಒಳಿತಿಗೆ ಕೊಡುಗೆ ನೀಡಲಿ, ಸುಭದ್ರ, ಸೌಹಾರ್ದ ಹಾಗೂ ಸಮೃದ್ಧ ಕರ್ನಾಟಕ ಹಾಗೂ ಭಾರತವನ್ನು ನಿರ್ಮಿಸಲು ಸಂವಿಧಾನದ ಶಕ್ತಿಯನ್ನು ಬಳಸಿಕೊಂಡು ಮುನ್ನಡೆಯೋಣ ಎಂದು ಸರ್ವರಿಗೂ ಗಣರಾಜ್ಯೋತ್ಸವ ಶುಭ ಹಾರೈಸಿದರು,

ಜಮಾಅತ್ ಖತೀಬ್ ಅಲ್ ಹಾಜ್ ಸಿದ್ದೀಕ್ ಝುಹ್ರಿ ದುಆ ನೆರವೇರಿಸಿ ಪ್ರಾಸ್ತಾವಿಕ ಭಾಷಣದಲ್ಲಿ ದೇಶದ ಸಂವಿಧಾನ, ಏಕತೆ ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸೋಣ. “ದೇಶಪ್ರೇಮವು ಈಮಾನ್‌ನ (ವಿಶ್ವಾಸದ) ಭಾಗವಾಗಿದೆ” ವಿಕಸಿತ ಭಾರತ ನಿರ್ಮಾಣಕ್ಕೆ ಶ್ರಮಿಸೋಣ. ಎಂದು ಸರ್ವರಿಗೂ ಗಣರಾಜ್ಯೋತ್ಸವ ಶುಭ ಹಾರೈಸಿದರು,

ಸದರ್ ಮುಅಲ್ಲಿಂ ನೌಶಾದ್ ಫಾಳಿಲಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು, ಸುಬುಲು ಸ್ಸಲಾಂ ಮದ್ರಸ ವಿಧ್ಯಾರ್ಥಿಗಳು ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂಧರ್ಭದಲ್ಲಿ ಜಮಾಅತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಎಸ್ ಎ, ಸದಸ್ಯರಾದ ಹಂಸ ಎಸ್ಟೇಟ್, ಕುಂಞಿಲಿ, ಖಾದರ್ ಟಿ ಎಂ, ಗಫೂರ್, ನಸೀರ್ ಟಿ ಕೆ, ಎಂ ಹೆಚ್ ಸಲಾಂ, ಉಮ್ಮರ್ ಚೆಡಾವು, ಸಿದ್ದೀಕ್, ಲತೀಫ್, ಎಸ್ ಕೆ ಮಹಮ್ಮದ್, ರಫೀಕ್ ಪಿ ಐ, ವಾಹಿದ್, ಇನ್ನಿತರ ಸದಸ್ಯರು, ಮದ್ರಸ ವಿಧ್ಯಾರ್ಥಿಗಳು, ಪೋಷಕರು, ಉಪಸ್ಥಿತರಿದ್ದರು.

ರಾಜ್ಯ ರಾಷ್ಟ್ರೀಯ