IND VS SA T20: ಲಕ್ನೋದಲ್ಲಿ ಮಂಜಿನಾಟ – ಒಂದೂ ಎಸೆತ ಕಾಣದೆ 4ನೇ ಟಿ20 ಪಂದ್ಯ ರದ್ದು!

IND VS SA T20: ಲಕ್ನೋದಲ್ಲಿ ಮಂಜಿನಾಟ – ಒಂದೂ ಎಸೆತ ಕಾಣದೆ 4ನೇ ಟಿ20 ಪಂದ್ಯ ರದ್ದು!

ಲಕ್ನೋ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯವು ಭಾರೀ ಮಂಜಿನ ಕಾರಣದಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿದೆ. ಬುಧವಾರ ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಈ ಪಂದ್ಯದಲ್ಲಿ ಕನಿಷ್ಠ ಟಾಸ್ ಪ್ರಕ್ರಿಯೆಯೂ ಸಾಧ್ಯವಾಗಲಿಲ್ಲ.

ಆರು ಬಾರಿ ಪರಿಶೀಲನೆ ನಡೆಸಿದ ಅಂಪೈರ್‌ಗಳು ಸಂಜೆ ವೇಳೆಗೆ ಮೈದಾನವನ್ನು ದಟ್ಟವಾದ ಮಂಜು ಆವರಿಸಿತ್ತು. ಇದರಿಂದಾಗಿ ಕ್ರೀಡಾಂಗಣದ ಫ್ಲಡ್‌ಲೈಟ್‌ಗಳು ಕೂಡ ಸರಿಯಾಗಿ ಕಾಣಿಸುತ್ತಿರಲಿಲ್ಲ. ಅಂಪೈರ್‌ಗಳು ಪ್ರತಿ 30 ನಿಮಿಷಕ್ಕೊಮ್ಮೆ ಒಟ್ಟು ಆರು ಬಾರಿ ಮೈದಾನದ ಪರಿಸ್ಥಿತಿಯನ್ನು ಪರಿಶೀಲಿಸಿದರು. ಆದರೆ ವಿಸಿಬಿಲಿಟಿ ಸುಧಾರಿಸದ ಕಾರಣ, ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾತ್ರಿ 9:30ರ ಸುಮಾರಿಗೆ ಪಂದ್ಯವನ್ನು ಕೈಬಿಡಲು ತೀರ್ಮಾನಿಸಲಾಯಿತು.

ಸರಣಿಯಲ್ಲಿ ಭಾರತಕ್ಕೆ 2-1 ಮುನ್ನಡೆ. ಈ ಪಂದ್ಯ ರದ್ದಾದ ಹೊರತಾಗಿಯೂ, ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಮೊದಲ ಮೂರು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತ, ಈಗಾಗಲೇ ಸರಣಿ ಸೋಲಿನ ಭೀತಿಯಿಂದ ಪಾರಾಗಿದೆ.

ಲಕ್ನೋ ಪಂದ್ಯದಿಂದ ನಿರಾಸೆಗೊಂಡಿರುವ ಅಭಿಮಾನಿಗಳ ಚಿತ್ತ ಈಗ ಸರಣಿಯ ಅಂತಿಮ ಮತ್ತು ಐದನೇ ಪಂದ್ಯದತ್ತ ನೆಟ್ಟಿದೆ. ಈ ನಿರ್ಣಾಯಕ ಪಂದ್ಯವು ಶುಕ್ರವಾರ (ಡಿಸೆಂಬರ್ 19) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿಯನ್ನು 3-1ರಿಂದ ಗೆಲ್ಲುವ ಗುರಿಯನ್ನು ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಹೊಂದಿದೆ.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ