ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಪ್ರೇಮ ನಿವೇದನೆ, ಕಿರುಕುಳ – ಪ್ರಾಣ ಬೆದರಿಕೆ ಹಾಕಿದ ಮಹಿಳೆ ವಿರುದ್ಧ ಎಫ್ಐಅರ್ ದಾಖಲು!

ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಪ್ರೇಮ ನಿವೇದನೆ, ಕಿರುಕುಳ – ಪ್ರಾಣ ಬೆದರಿಕೆ ಹಾಕಿದ ಮಹಿಳೆ ವಿರುದ್ಧ ಎಫ್ಐಅರ್ ದಾಖಲು!

ಬೆಂಗಳೂರು: ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಪ್ರೇಮ ಪ್ರಸ್ತಾಪ ಸಲ್ಲಿಸಿ, ಅದನ್ನು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಮಹಿಳೆಯೊಬ್ಬರ ಮೇಲೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯ 45 ವರ್ಷದ ಇನ್ಸ್‌ಪೆಕ್ಟರ್ ಒಬ್ಬರು ಈ ಸಂಬಂಧ ದೂರು ನೀಡಿದ್ದಾರೆ. ಅಪರಿಚಿತ ಮಹಿಳೆಯೊಬ್ಬರು ಕಳೆದ ಅಕ್ಟೋಬರ್ 30 ರಿಂದ ನಿರಂತರವಾಗಿ ಬೇರೆ ಬೇರೆ ಫೋನ್ ನಂಬರ್‌ಗಳಿಂದ ಕರೆ ಮಾಡಿ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅಕ್ಟೋಬರ್ ಅಂತ್ಯದಿಂದ ಇನ್ಸ್‌ಪೆಕ್ಟರ್‌ಗೆ ಹಲವಾರು ಸಂಖ್ಯೆಗಳಿಂದ ಕರೆಗಳು ಬರತೊಡಗಿದ್ದವು. ಮಹಿಳೆಯು ಇನ್ಸ್‌ಪೆಕ್ಟರ್‌ಗೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಅಧಿಕೃತ ಕೆಲಸದ ವೇಳೆಯೂ ಪದೇ ಪದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದುದರಿಂದ ಇನ್ಸ್‌ಪೆಕ್ಟರ್ ಅವರ ದೈನಂದಿನ ಕಚೇರಿ ಕೆಲಸಗಳಿಗೆ ತೊಂದರೆಯುಂಟಾಗಿದೆ. ಇನ್ಸ್‌ಪೆಕ್ಟರ್ ಮಹಿಳೆಯ ಪ್ರಸ್ತಾಪವನ್ನು ತಿರಸ್ಕರಿಸಿದಾಗ, “ನೀವು ನನ್ನನ್ನು ಪ್ರೀತಿಸದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಸರ್ಕಾರಿ ಅಧಿಕಾರಿಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಆತ್ಮಹತ್ಯೆಯ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ಆರೋಪದ ಮೇಲೆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪರಾಧ ರಾಜ್ಯ