ಹೈದರಾಬಾದ್: ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಗುಂಡಿನ ದಾಳಿಯ ಶಂಕಿತರಲ್ಲಿ ಒಬ್ಬನಾದ ಸಾಜಿದ್ ಅಕ್ರಮ್ ಮೂಲತಃ ಹೈದರಾಬಾದ್‌ನವನು ಎಂದು ತೆಲಂಗಾಣ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸಾಜಿದ್ ಅಕ್ರಮ್ 27 ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದನು ಮತ್ತು ಹೈದರಾಬಾದ್‌ನಲ್ಲಿರುವ ತನ್ನ ಕುಟುಂಬದೊಂದಿಗೆ ಸೀಮಿತ ಸಂಪರ್ಕವನ್ನು ಹೊಂದಿದ್ದನು ಎಂದು ತೆಲಂಗಾಣ ಡಿಜಿಪಿ (DGP) ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಾಜಿದ್ ಅಕ್ರಮ್ ಮತ್ತು ಆತನ ಮಗ ನವೀದ್ ಅಕ್ರಮ್ಅ ಅವರ ಮೂಲಭೂತವಾದಕ್ಕೆ ಕಾರಣವಾದ ಅಂಶಗಳು ಭಾರತ ಅಥವಾ ತೆಲಂಗಾಣದ ಯಾವುದೇ ಸ್ಥಳೀಯ ಪ್ರಭಾವದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

