ರೋಟರಿ ಚಾರಿಟೇಬಲ್ ಟ್ರಸ್ಟ್ (ರಿ)ಸುಳ್ಯ ಇದರ ಆಡಳಿತಕ್ಕೆ ಒಳಪಟ್ಟಿರುವ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ರೋಟರಿ ಪ್ರೀಮಿಯರ್ ಲೀಗ್ ಮಾದರಿಯ ಆರ್ಮ್ ಕ್ರಿಕೆಟ್ ಪಂದ್ಯಾವಳಿ- ರೋಟರಿ ಕಪ್ ಸೀಸನ್ -೪ ಡಿಸೆಂಬರ್ ೧೪ರಂದು ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೈದಾನ ಮಿತ್ತಡ್ಕದಲ್ಲಿ ವಿಜ್ರಂಭಣೆಯಿಂದ ನಡೆಯಿತು.

ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯದ ಅಧ್ಯಕ್ಷರಾಗಿರುವ ರೊ.ಮೇಜರ್ ಡೋನರ್ ಡಾ.ರಾಮ ಮೋಹನ್ ಅವರ ಸಭಾಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಮಿತ ಸಮಯದ ಅನುಕೂಲಕರ ಕಾರ್ಯಯೋಜನೆ ಮತ್ತು ಪಂದ್ಯಾಟದ ಬಗ್ಗೆ ಮಾಹಿತಿ ನೀಡಿದರು. ಈ ಪಂದ್ಯಾವಳಿಯನ್ನು ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾಗಿರುವ ರೊ.ಎಂ.ಪಿ.ಹೆಚ್ ಎಫ್ ಪ್ರಭಾಕರನ್ ನಾಯರ್ ಅವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಮಾನವೀಯತೆಯ ಮೌಲ್ಯಗಳ ಮಹತ್ವವನ್ನು ತಿಳಿಸಿ ಸಾಧನೆಗೆ ಸೌಂದರ್ಯದ ಭೇದವಿಲ್ಲ,ಪರಿಶ್ರಮಿಗಳು ಸಾಧಕರಾದ ಬಗೆಯನ್ನು ದೃಷ್ಟಾಂತಗಳ ಮೂಲಕ ಅರ್ಥೈಸಿದರು.ತದನಂತರ ಅವರು ಆರ್.ಪಿ.ಎಲ್ ಸೀಜನ್ -೪ರ ಬ್ಯಾನರನ್ನು ವಾದ್ಯಘೋಷಗಳೊಂದಿಗೆ ಅದ್ದೂರಿಯಾಗಿ ಪ್ರದರ್ಶನಗೊಳಿಸುವುರೊಂದಿಗೆ ಪಂದ್ಯಾವಳಿಯನ್ನು ಚಾಲನೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ದಾಮೋದರ ಕೋಲ್ಚಾರು ಅವರು ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ದೈಹಿಕ ಶಿಕ್ಷಕರಾದ ಶ್ರೀ ರಂಗನಾಥ್.ಎಸ್, ಉಪನ್ಯಾಸಕರಾದ ಶ್ರೀ ಹರ್ಷಿತ್ ಜಿ.ಜೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರೀಡಾಂಗಣವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು.ವಿದ್ಯಾರ್ಥಿಗಳಾದ ಬಾನವಿ, ಯಜ್ಞಾ, ವೈಷ್ಣವಿಯವರು ಪ್ರಾರ್ಥಿಸಿದರು.
ಉಪನ್ಯಾಸಕಿಯಾಗಿರುವ ಶ್ರೀಮತಿ ಸರಿತಾ.ಕೆ ಅವರು ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ವಿದ್ಯಾರ್ಥಿಗಳಾದ ಶೀಶಾಲಿ ಮತ್ತು ಫಾತಿಮತ್ ಶೈಮ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಮುಂಜಾನೆಯಿಂದ ಸಂಜೆಯವರೆಗೆ ನಡೆದ ಈ ಪಂದ್ಯದ ಸಮಾರೋಪ ಸಮಾರಂಭದಲ್ಲಿ ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯದ ನಿಯೋಜಿತ ಅಧ್ಯಕ್ಷೆ ಯಾಗಿರುವ ಶ್ರೀಮತಿ ಲತಾ ಮಧುಸೂದನ್ ಅವರು ಕಾರ್ಯಕ್ರಮದ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಸ್ನೇಹ ಮತ್ತು ಸೌಹಾರ್ದತೆಯನ್ನು ಬೆಳೆಸುವುದು ಎಂದು ಸ್ಪೂರ್ತಿ ದಾಯಕ ಸಂದೇಶವನ್ನು ನೀಡಿದರು.
ಸಂಚಾಲಕರಾದ ರೊ.ಪ್ರಭಾಕರನ್ ನಾಯರ್, ಟ್ರಸ್ಟಿಗಳಾದ ರೊ.ಮಧುಸೂದನ್, ಶ್ರೀ ರಾಜು ಪಂಡಿತ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.ಎಲ್ಲಾ ತಂಡಗಳು ಅದ್ಭುತ ಪ್ರದರ್ಶನ ನೀಡಿದವು.ರೋಟರಿ ಡ್ರ್ಯಾಗನ್ ತಂಡವು ರನ್ನರ್ಸ್ ಗಳಾದರೆ ರೋಟರಿ ಮಾಸ್ಟರ್ಸ್ ತಂಡವು ಚಾಂಪಿಯನ್ಸ್ ಗಳಾಗಿ ಸಂಭ್ರಮಿಸಿದರು. ರಕ್ಷಕ ಶಿಕ್ಷಕ ಸಮಿತಿಯ ಸದಸ್ಯರಾದ ಶ್ರೀಮತಿ ನಳಿನಾಕ್ಷಿ ಕುಂಜತ್ತಾಯ, ಶ್ರೀ ಮುಹಮ್ಮದ್ ಹನೀಫ್ ಅವರು ಉಪಸ್ಥಿತರಿದ್ದರು. ಪಂದ್ಯಾಕೂಟದ ನಿರ್ಣಾಯಕರಾಗಿ ಶ್ರೀ ಮನೋಜ್ ಪೈಲಾರ್ ಮತ್ತು ಧನ್ಯರಾಜ್ ನಾಗಪಟ್ಟಣ; ವೀಕ್ಷಕ ವಿವರಣೆಗಾರರಾಗಿ ಶ್ರೀ ಶಶಿಕಾಂತ್ ಮಿತ್ತೂರು ಮತ್ತು ಶ್ರೀ ನವೀನ್ ಬಾಂಜಿಕೋಡಿ; ಸ್ಕೋರರ್ ಗಳಾಗಿ ಶ್ರೀ ಸಾತ್ವಿಕ್ ಮಡಪ್ಪಾಡಿ ಮತ್ತು ಶ್ರೀ ಸುಧೀರ್ ದೇವ ಮುಂತಾದವರು ಸಹಕರಿಸಿದರು.

