ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ (ರಿ.) ನೇತೃತ್ವದಲ್ಲಿ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಇದೇ ಬರುವ ಡಿಸೆಂಬರ್ 13, 2025 ರಂದು (ಶನಿವಾರ) ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ 31ನೇ ವರ್ಷದ ಮಹಾ ದೀಪೋತ್ಸವವನ್ನು ಆಚರಿಸಲು ತೀರ್ಮಾನಿಸಲಾಗಿದೆ. ಈ ದೀಪೋತ್ಸವದ ಪ್ರಯುಕ್ತ ದಿನವಿಡೀ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರಾತಃಕಾಲ ಗಣಪತಿ ಹವನ, ಉಷಾ ಪೂಜೆ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 6:00 ಗಂಟೆಗೆ ಹಳೆಗೇಟು ಬಳಿಯಿಂದ ಗಾಂಧಿನಗರವಾಗಿ ಶ್ರೀ ಚೆನ್ನಕೇಶವ ದೇವಸ್ಥಾನದವರೆಗೆ ಚೆಂಡೆ, ವಾದ್ಯ ಮತ್ತು ಸಿಡಿಮದ್ದುಗಳೊಂದಿಗೆ ಅಯ್ಯಪ್ಪ ಭಕ್ತಾದಿಗಳು ಪಾಲ್ಗೊಳ್ಳುವ **“ಪಾಲ್‌ಕೊಂಬು ಮೆರವಣಿಗೆ”**ಯು ವಿದ್ಯುತ್ ಪ್ರಭಾವಳಿಯೊಂದಿಗೆ ಸಾಗಲಿದೆ.
ರಾತ್ರಿ 7:30 ರಿಂದ 9:30 ರವರೆಗೆ ಶ್ರೀ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಹಾಗೂ ರಾತ್ರಿ 9:30 ರಿಂದ ರವಿಕುಮಾರ್ ಸುರತ್ಕಲ್ ವಿರಚಿತ ‘ಬಂಗಾರ ಕುರಾಲ್’ ಯಕ್ಷಗಾನ ಬಯಲಾಟವು ನಡೆಯಲಿದೆ. ಭಾನುವಾರ ಪ್ರಾತಃಕಾಲ 4:30ಕ್ಕೆ ಅನ್ನಿಸೇವೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

