ಮುಂಬೈ (ನ.24): ಭಾರತೀಯ ಚಿತ್ರರಂಗದ ‘ಲೆಜೆಂಡರಿ’ ನಟ, ಅಭಿಮಾನಿಗಳಿಂದ ‘ಹೀ ಮ್ಯಾನ್’ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಧರ್ಮೇಂದ್ರ ಅವರು, 89ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರು ಇಂದು ನಿಧನರಾಗಿದ್ದಾರೆ.
ಬಾಲಿವುಡ್‌ನ ಗೋಲ್ಡನ್ ಯುಗದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದ ಧರ್ಮೇಂದ್ರ ಅವರ ನಿಧನಕ್ಕೆ ಭಾರತೀಯ ಸಿನಿಮಾರಂಗ ಹಾಗು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಬಹುಕಾಲದಿಂದ ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ಧರ್ಮೇಂದ್ರ ಅವರ ಆರೋಗ್ಯವು ಇತ್ತೀಚೆಗೆ ನಿರಂತರವಾಗಿ ಕ್ಷೀಣಿಸುತ್ತಿತ್ತು. ‘ಫೂಲ್ ಔರ್ ಪತ್ಥರ್’ (Phool Aur Patthar) ಚಿತ್ರದ ಮೂಲಕ ನಾಯಕ ನಟನಾಗಿ ಪ್ರಸಿದ್ಧಿಗೆ ಬಂದ ಅವರು, ತಮ್ಮ ಮೋಡಿಮಾಡುವ ವ್ಯಕ್ತಿತ್ವ, ಹೃದಯವಂತಿಕೆ ಮತ್ತು ಕಾಲಾತೀತ ಅಭಿನಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.

