ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ರಿ) SSF ರಾಷ್ಟ್ರೀಯ ಸಾಹಿತ್ಯೋತ್ಸವ ನವಂಬರ್ 14,15,16 ತಾರೀಖುಗಳಲ್ಲಿ ರಾಜ್ಯದ ಗುಲ್ಬರ್ಗಾದಲ್ಲಿ ಜರಗಿತು. ರಾಷ್ಟ್ರದ 26 ರಾಜ್ಯಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಿದರು.

ಜೂನಿಯರ್ ವಿಭಾಗದ ಉರ್ದು ನ ಅತ್ ಸ್ಪರ್ಧೆಯಲ್ಲಿ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಗಾಂಧಿನಗರ ವಿದ್ಯಾರ್ಥಿಗಳಾದ ಅಹ್ಮದ್ ಅಬ್ರಾರ್, ಮುಹಮ್ಮದ್ ಫರಾಝ್ ಮತ್ತು ಮುಹಮ್ಮದ್ ಅಂಫಾಲ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ನಮ್ಮ ಮದ್ರಸದ ಈ ಮೂರು ವಿದ್ಯಾರ್ಥಿಗಳ ಈ ವಿಶೇಷ ಸಾಧನೆಗೆ ಮುಹಿಯದ್ದೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿ, ಮದ್ರಸ ಉಸ್ತುವಾರಿಗಳು ಸ್ಟಾಫ್ ಕೌನ್ಸಿಲ್ ಮತ್ತು SBS ಯುನಿಟ್ ಸಮಿತಿ ಅಭಿನಂದನೆಗಳು ಸಲ್ಲಿಸಿದರು.

