ಮಂಡ್ಯ: ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟ ವತಿಯಿಂದ ಕನ್ನಡ ಕಲಿಸುವ ಕನ್ನಡ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಎಂಬ ವಿನೂತನ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯ ಚಂದಗಾಲು ಗ್ರಾಮದಲ್ಲಿ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಖ್ಯಾತ ನಟರಾದ ಶ್ರೀ ಪ್ರಮೋದ್ ಪಂಜು ರವರು ಆಗಮಿಸಿ ಶಾಲಾ ಶಿಕ್ಷಕರಿಗೆ ಕನ್ನಡ ಸೇವಾ ಪ್ರಶಸ್ತಿ ಪ್ರಧಾನ ಮಾಡಿ ಶಿಕ್ಷಕರನ್ನು ಗೌರವಿಸಿದರು ಕನ್ನಡ ಶಾಲೆಗಾಗಿ ನಾವು ನೀವು ಕನ್ನಡ ಶಾಲೆಗಳನ್ನು ಉಳಿಸೋಣ ಕನ್ನಡ ಶಾಲೆಗಳನ್ನು ಬೆಳೆಸೋಣ ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟವು ರಾಜ್ಯಾದ್ಯಂತ ಕನ್ನಡ ಶಾಲೆಗಳ ಉಳಿಯುವಿಗಾಗಿ ಸಾಕಷ್ಟು ಹೋರಾಟಗಳನ್ನು ಮಾಡುತ್ತಿದೆ.
ಈ ಸಂಘಟನೆಗೆ ನನ್ನ ಶುಭ ಹಾರೈಕೆಗಳು ಎಂದು ಶುಭ ಹಾರೈಸಿದರು ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಶಾಲೆಗಳು ಉಳಿಯಬೇಕು ಎಂಬ ವಿಷಯವನ್ನು ಪ್ರಸ್ತಾಪಿಸಿ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಸಂಭ್ರಮಿಸಿದರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಚಿತ್ರರಂಗದ ನಾಯಕ ನಟರುಗಳು ಕನ್ನಡ ಶಾಲೆಗಳಿಗೆ ಆಗಮಿಸಿ ಕನ್ನಡ ಭಾಷೆಯನ್ನ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ ಈ ನಿಟ್ಟಿನಲ್ಲಿ ಖ್ಯಾತ ನಟರಾದ ಪ್ರಮೋದ್ ಪಂಜುರ್ ಅವರು ಕನ್ನಡ ಶಾಲೆಗಳಿಗೆ ಆಗಮಿಸಿ ಕನ್ನಡ ಭಾಷೆ ಕನ್ನಡ ಶಾಲೆಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಪ್ರಶಂಶಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಟಿ ಎಂ ಸಿ ಅಧ್ಯಕ್ಷರಾದ ಶ್ರೀ ನಾಗೇಶ್ ರವರು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚ.ನಾ.ಅನಂತರಾಜು ರವರು ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟದ ಅಧ್ಯಕ್ಷರಾದ ನಾಗಲಿಂಗ ಸ್ವಾಮಿ ರವರು, ಒಕ್ಕೂಟದ ನಿರ್ದೇಶಕರಾದ ಶ್ರೇಯ ಜವರಯ್ಯ , ರಮ್ಯ, ನಳಿನಿ, ಕುಮಾರ್, ಸದಾಶಿವ, ಶಿವಕುಮಾರ್, ಪವಿತ್ರ, ಹಾಗೂ ಶಾಲೆಯ ಶಿಕ್ಷಕ ವೃಂದಾ ಮತ್ತು ಪೂಷಕರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು

