ನವದೆಹಲಿ: ಭಾರತೀಯ ಹ್ಯಾಮರ್ ಥ್ರೋ ಆಟಗಾರ್ತಿ ಮಂಜು ಬಾಲಾ ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ (ನಾಡಾ) ದ ಡೋಪಿಂಗ್ ವಿರೋಧಿ ಶಿಸ್ತು ಸಮಿತಿ (ಎಡಿಡಿಪಿ) ಐದು ವರ್ಷದ ನಿಷೇಧವನ್ನು ವಿಧಿಸಿದೆ.

ಮಂಜು ಬಾಲಾ ಅವರ ಮಾದರಿ ಪರೀಕ್ಷೆಯಲ್ಲಿ ನಿಷೇಧಿತ ಔಷಧೀಯ ಪದಾರ್ಥಗಳು ಪತ್ತೆಯಾಗಿರುವುದರಿಂದ,ಡೋಪಿಂಗ್ ವಿರೋಧಿ ಶಿಸ್ತು ಸಮಿತಿ ಅವರು ಈ ಕಠಿಣ ಕ್ರಮವನ್ನು ಕೈಗೊಂಡಿದ್ದಾರೆ. ಈ ನಿಷೇಧ ಅವಧಿಯಲ್ಲಿ ಅವರು ಯಾವುದೇ ರಾಷ್ಟ್ರಮಟ್ಟದ ಅಥವಾ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ನಾಡಾ ಇತ್ತೀಚೆಗೆ ದೇಶದ ಕ್ರೀಡಾಂಗಣದಲ್ಲಿ ಡೋಪಿಂಗ್ ವಿರುದ್ಧದ ಕ್ರಮಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ನಿಗಾ ವ್ಯವಸ್ಥೆಯನ್ನು ಬಲಪಡಿಸಿದೆ.

