ಕರಾವಳಿಯಲ್ಲಿ ಮಳೆಗಾಲ ಮುಗಿದಂತೆ ಕಾಣುತ್ತಿಲ್ಲ. ನವೆಂಬರ್ ತಿಂಗಳು ಪ್ರಾರಂಭವಾದರೂ ಮಳೆ ನಿಲ್ಲುವ ಲಕ್ಷಣವೇ ಇಲ್ಲ. ಇಂದು ಕೂಡ ಸುಳ್ಯದಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿವೆ.

ಅಕಾಲಿಕ ಮಳೆಯಿಂದ ಈಗಾಗಲೇ ಅಡಿಕೆ ಬೆಳೆಗಾರರು ಕಂಗೆಟ್ಟಿದ್ದಾರೆ. ನಿರಂತರ ಮಳೆಯಿಂದ ಬೆಳೆಗಳಿಗೆ ಇನ್ನಷ್ಟು ಹಾನಿ ಸಂಭವಿಸುವ ಸಾದ್ಯತೆ ಇದೆ.


