ಭಾರತದ ಮೊದಲ ಪ್ಯಾರಾ ಅಥ್ಲೀಟ್‌ ಆಗಿ ಸಾಮಾನ್ಯ ರಾಷ್ಟ್ರೀಯ ಬಿಲ್ಲುಬಾಣ ತಂಡಲ್ಲಿ ಸ್ಥಾನ ಪಡೆದ ಶೀತಲ್ ದೇವಿ!

ಭಾರತದ ಮೊದಲ ಪ್ಯಾರಾ ಅಥ್ಲೀಟ್‌ ಆಗಿ ಸಾಮಾನ್ಯ ರಾಷ್ಟ್ರೀಯ ಬಿಲ್ಲುಬಾಣ ತಂಡಲ್ಲಿ ಸ್ಥಾನ ಪಡೆದ ಶೀತಲ್ ದೇವಿ!

ಜಮ್ಮು ಮತ್ತು ಕಾಶ್ಮೀರದ 18 ವರ್ಷದ ವಿಶ್ವ ಚಾಂಪಿಯನ್ ಶೀತಲ್ ದೇವಿ ಇತಿಹಾಸ ನಿರ್ಮಿಸಿದ್ದಾರೆ. ಅವರು ಸಾಮಾನ್ಯ (ಎಬಲ್-ಬಾಡೀಡ್) ರಾಷ್ಟ್ರೀಯ ಬಿಲ್ಲುಬಾಣ ತಂಡದಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಪ್ಯಾರಾ ಅಥ್ಲೀಟ್ ಆಗಿದ್ದಾರೆ.

ಶೀತಲ್ ದೇವಿ ಡಿಸೆಂಬರ್ 10ರಿಂದ 15ರವರೆಗೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯಲಿರುವ ಏಷ್ಯಾ ಕಪ್ ಹಂತ–3ರಲ್ಲಿ ಸ್ಪರ್ಧಿಸಲಿದ್ದಾರೆ.

ಅಂಗವೈಕಲ್ಯವನ್ನು ಮೀರಿಸಿ ಶ್ರದ್ಧೆ, ಶ್ರಮ ಮತ್ತು ಆತ್ಮವಿಶ್ವಾಸದಿಂದ ಅಸಾಧ್ಯವನ್ನು ಸಾಧ್ಯವಾಗಿಸಿದ ಶೀತಲ್ ದೇವಿಯ ಸಾಧನೆಗೆ ದೇಶದಾದ್ಯಂತ ಅಭಿನಂದನೆಗಳ ಮಳೆ ಸುರಿಯುತ್ತಿದೆ.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ