ಕನ್ನಡದ ಖ್ಯಾತ ನಟ ಹರೀಶ್ ರಾಯ್ ನಿಧನ

ಕನ್ನಡದ ಖ್ಯಾತ ನಟ ಹರೀಶ್ ರಾಯ್ ನಿಧನ

ಕನ್ನಡ ಚಿತ್ರರಂಗದ ಹಿರಿಯ ಖಳನಟ ಹಾಗೂ ಕೆಜಿಎಫ್ ಖ್ಯಾತಿಯ ಹರೀಶ್ ರಾಯ್ ನಿಧನರಾಗಿದ್ದಾರೆ. ಹಲವು ದಿನಗಳಿಂದ ಲಿವರ್ ಮತ್ತು ಕಿಡ್ನಿ ಸಂಬಂಧಿಸಿದ ರೋಗದಿಂದ ಬಳಲುತ್ತಿದ್ದ ಅವರಿಗೆ ಧ್ರುವ ಸರ್ಜಾ ಸೇರಿದಂತೆ ಅವರಿಗೆ ಹಲವು ನಟರು ಸಹಾಯ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಹರೀಶ್ ರಾಯ್ ಅವರು ‘ಓಂ’ ಸಿನಿಮಾದಲ್ಲಿ ಡಾನ್ ರೈ ಪಾತ್ರ ಮತ್ತು ಕೆಜಿಎಫ್ ಚಿತ್ರದಲ್ಲಿ ಚಾಚಾ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು. ಕಳೆದ ಕೆಲ ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಈ ರೋಗವು ನಂತರ ಹೊಟ್ಟೆಯ ಭಾಗಕ್ಕೂ ಹಬ್ಬಿತ್ತು ಎಂದು ಸ್ವತಃ ಅವರು ಹೇಳಿಕೊಂಡಿದ್ದರು.

ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಗೋಪಿ ಗೌಡ್ರು ಅವರು ಅವರನ್ನು ಭೇಟಿ ಮಾಡಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಹರೀಶ್ ರಾಯ್ ಅವರು ತಮ್ಮ ಚಿಕಿತ್ಸೆಗಾಗಿ ಸಾರ್ವಜನಿಕರಿಂದ ಆರ್ಥಿಕ ನೆರವು ಕೋರಿ, ಆರೋಗ್ಯ ಸುಧಾರಿಸಿದರೆ ಮತ್ತೆ ಸಿನಿಮಾ ಕ್ಷೇತ್ರಕ್ಕೆ ಮರಳಲು ಬಯಸಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ನಟ ಇಂದು ನಿಧನರಾದರು. ಅವರ ನಿಧನಕ್ಕೆ ಚಿತ್ರರಂಗದ ಸಹೋದ್ಯೋಗಿಗಳು ಮತ್ತು ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ. ಹರೀಶ್ ರಾಯ್ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ರಾಜ್ಯ