ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಳ್ಯದ ಶೈಕ್ಷಣಿಕ ಕ್ರಾಂತಿಯ ಹರಿಕಾರ ಡಾ ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರು ಸಮರ್ಪಿಸುವ 18 ಅಡಿ ಎತ್ತರದ ಚಿನ್ನದ ಕಲಶ ಸಹಿತ ಬೆಳ್ಳಿ ರಥ ಇಂದು ಬೆಳಗ್ಗೆ ಸುಳ್ಯದ ಕೆವಿಜಿ ಸರ್ಕಲ್ ನಿಂದ ಹೊರಟು ಭವ್ಯ ಮೆರವಣಿಗೆಯೊಂದಿಗೆ ಇದೀಗ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಿದೆ.

ಬೆಳಿಗ್ಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಶಾಸಕಿ ಭಾಗೀರತಿ ಮುರುಳ್ಯ ಮತ್ತು ಅನೇಕ ಗಣ್ಯರಿಂದ ಕೆವಿಜಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಪೂರ್ಣ ಕುಂಭ, ಚಂಡೆ ವಾದ್ಯಗಳೊಂದಿಗೆ ಕುಣಿತ ಭಜನೆ ಮತ್ತು ಕಲ್ಲಡ್ಕ ಬೊಂಬೆಗಳ ಮೆರುಗಿನೊಂದಿಗೆ ಹೊರಟ ಮೆರವಣಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಂಪನ್ನಗೊಂಡಿತು.
ನವಂಬರ್ 10ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಈ ಬೆಳ್ಳಿ ರಥ ಸಮರ್ಪಣೆಯಾಗಲಿದ್ದು ಅಂದು ಮೊದಲ ಬೆಳ್ಳಿ ರಥೋತ್ಸವ ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರ ಸೇವೆಯಾಗಿರುತ್ತದೆ.


