ಶಿಕ್ಷಣ ಬ್ರಹ್ಮ ಡಾ ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸುವ 18 ಅಡಿ ಎತ್ತರದ ಬೆಳ್ಳಿಯ ರಥ ಕೋಟೇಶ್ವರದಿಂದ ಹೊರಟು ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಭವ್ಯ ಸ್ವಾಗತ ಪಡೆದು ಸಮಾಜದ ಹಲವು ಗಣ್ಯರಿಂದ ಪುಷ್ಪಾರ್ಚನೆಗೊಂಡು ಇನ್ನು ಅಲ್ಪ ಸಮಯದಲ್ಲಿ ಸುಳ್ಯ ಪುರ ಪ್ರವೇಶ ಮಾಡಲಿದೆ.


ಚಂಡೆ ವಾದ್ಯಗಳೊಂದಿಗೆ ಪೂರ್ಣ ಕುಂಭ ಸ್ವಾಗತಕ್ಕೆ ಸುಳ್ಯದ ಜ್ಯೋತಿ ಸರ್ಕಲ್ ಸಿದ್ದಗೊಂಡಿದೆ. ನಾಳೆ ಅದ್ದೂರಿ ಮೆರವಣಿಗೆಯೊಂದಿಗೆ ಬೆಳ್ಳಿ ರಥ ಸುಬ್ರಹ್ಮಣ್ಯ ತಲುಪಲಿದೆ.


