ಸುಳ್ಯ-ರಾಜ್ಯೋತ್ಸವದ ಪ್ರಯುಕ್ತ ಚುಟುಕು ಕವಿಗೋಷ್ಠಿ ಹಾಗೂ ಸಂಗೀತ ಸಂಭ್ರಮ

ಸುಳ್ಯ-ರಾಜ್ಯೋತ್ಸವದ ಪ್ರಯುಕ್ತ ಚುಟುಕು ಕವಿಗೋಷ್ಠಿ ಹಾಗೂ ಸಂಗೀತ ಸಂಭ್ರಮ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಚಿತೇಶ್ ಸಂಗೀತ ಬಳಗ ಐವರ್ನಾಡು ಸುಳ್ಯ ಇದರ ವತಿಯಿಂದ ಚುಟುಕು ಕವಿಗೋಷ್ಠಿ ಮತ್ತು ಸಂಗೀತ ಸಂಭ್ರಮ-2025 ಸುಳ್ಯದ ದೇವಮ್ಮ ಕಾಂಪ್ಲೆಕ್ಸಿ ನ ಸಭಾಂಗಣದಲ್ಲಿ ನ 2 ರಂದು ಜರುಗಿತು.ಸ್ವಾಗತವನ್ನು ಅಮಿತಾ ಲಾವಂತಡ್ಕ ಮಾಡಿದರು. ಪ್ರಾಸ್ತಾವಿಕ ನುಡಿ ಪರುಮಾಳ್ ಲಕ್ಷ್ಮಣ ಮಾಡಿದರು.ಪುಷ್ಪಾವತಿ ಡಿ.ಪ್ರಾರ್ಥನೆ ಗೀತೆ ಹಾಡಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿತೇಶ್ ಸಂಗೀತ ಬಳಗ ಐವರ್ನಾಡು ಸುಳ್ಯ ಇದರ ಸದಸ್ಯರಾದ ಪ್ರಸಾದ್ ಕೆಮ್ಮಿಂಜೆ ವಹಿಸಿದ್ದರು.ದೀಪ ಪ್ರಜ್ವಲನೆಯನ್ನು ಚಂದನಾ ಸಾಹಿತ್ಯ ವೇದಿಕೆ ಸುಳ್ಯ ಇದರ ಅಧ್ಯಕ್ಷರಾದ ಸಂಧ್ಯಾ ಉಬರಡ್ಕ ಮಾಡಿದರು.ಕಾರ್ಯಕ್ರಮದ ಸಂಯೋಜಕರಾದ ಹಾಗೂ ಸಂಸ್ಥೆಯ ಅಧ್ಯಕ್ಷರು ಪೆರುಮಾಳ್ ಲಕ್ಷ್ಮಣ್ ಐವರ್ನಾಡು ವೇದಿಕೆಯಲ್ಲಿ ಉಪಸ್ಥಿತಿ ವಹಿಸಿದ್ದರು.

ಸಭಾ ಕಾರ್ಯಕ್ರಮದ ನಂತರ ಗಾಯನ ಸಮಾಗಮ ನಡೆಯಿತು.ಗಾಯಕರಾದ ಪುಷ್ಪಾವತಿ ಡಿ,ಎಂ.ಎ.ಮುಸ್ತಫಾ ಬೆಳ್ಳಾರೆ,ಶಯನಾ,ಶುಭಾ ರೈ ಪುತ್ತೂರು,ಸಾವಿತ್ರಿ ದೊಡ್ಮನೆ,ಧೃತಿ ಲಾವಂತಡ್ಕ,ವಿಜಯಕುಮಾರ್ ಕಾಣಿಚ್ಚಾರ್,ಪ್ರಮೀಳಾರಾಜ್,ಗಿರೀಶ್ ಪೆರಿಯಡ್ಕ,ಸುರೇಶ್ ರಾವ್ ಮಂಗಳೂರು,ಅಮಿತಾ ಲಾವಂತಡ್ಕ ಕನ್ನಡದ ಭಾವ ಚಂದದ ಗೀತೆಗಳನ್ನು ಹಾಡಿದರು.ನಂತರ ಹಿರಿಯ ಕವಿಗಳಾದ ನಾರಾಯಣ ರೈ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ಜರುಗಿತು.ಕವಿಗಳಾದ ಪುಷ್ಪಾವತಿ ಡಿ,ಎಂ.ಎ.ಮುಸ್ತಫಾ ಬೆಳ್ಳಾರೆ,ಶುಭಾ ರೈ ಪುತ್ತೂರು,ವಿಜಯಕುಮಾರ್ ಕಾಣಿಚ್ಚಾರ್,ಗಿರೀಶ್ ಪೆರಿಯಡ್ಕ,ತೇಜಸ್ವಿನಿ,ಸುಮಂಗಲಾ ಲಕ್ಷ್ಮಣ್ ಚುಟುಕುಗಳನ್ನು ವಾಚಿಸಿದರು. ಶುಭ ರೈ ಪುತ್ತೂರು ಕಾರ್ಯಕ್ರಮ ನಿರೂಪಣೆ ಮಾಡಿದರು ಈ ಸಾಹಿತ್ಯ,ಸಂಗೀತ ಸಂಭ್ರಮ ಅಂತ್ಯದಲ್ಲಿ ಯಶುಭಾ ರೈ ಧನ್ಯವಾದ ಸಲ್ಲಿಸಿದರು.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

ಮನೋರಂಜನೆ ರಾಜ್ಯ