ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ 17ನೇ ರಾಷ್ಟ್ರೀಯ ಉದ್ಯೋಗ ಮೇಳದ (rozgar mela) ವೀಡಿಯೋ ಸಂದೇಶದಲ್ಲಿ ಮಾತನಾಡಿ, ಉದ್ಯೋಗ ಮೇಳಗಳು ದೇಶದ ಯುವಕರ ಕನಸುಗಳಿಗೆ ಪೂರಕವಾಗಿವೆ ಎಂದು ತಿಳಿಸಿದ್ದಾರೆ. ವಿವಿಧ ಕೇಂದ್ರ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ನೇಮಕಗೊಂಡ 51 ಸಾವಿರಕ್ಕೂ ಹೆಚ್ಚು ಯುವಕರಿಗೆ ನೇಮಕ ಪತ್ರ ಹಂಚುವ ಕಾರ್ಯಕ್ರಮ ಹೊಸ ಉತ್ಸಾಹ ತಂದಿದೆ ಎಂದು ಹೇಳಿದರು.

ಅವರು, ಉದ್ಯೋಗ ಮೇಳಗಳ ಮೂಲಕ ಕಳೆದ ಕೆಲವು ವರ್ಷಗಳಲ್ಲಿ 11 ಲಕ್ಷಕ್ಕೂ ಅಧಿಕ ಯುವಕರಿಗೆ ನೇಮಕಾತಿ ಪತ್ರಗಳನ್ನು ಸರ್ಕಾರ ನೀಡಿರುವುದನ್ನು ಉಲ್ಲೇಖಿಸಿದರು. ಇದೇ ಸಂದರ್ಭದಲ್ಲಿ, ದೇಶದೆಲ್ಲೆಡೆ ‘ವಿಕಸಿತ ಭಾರತ ಯೋಜನೆ’ ಯನ್ನು ಪ್ರಾರಂಭಿಸಿದ್ದು, 3.5 ಕೋಟಿ ಯುವಕರಿಗೆ ಉದ್ಯೋಗಾವಕಾಶ ಒದಗಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.
ಕಳೆದ 11 ವರ್ಷಗಳಿಂದ ‘ವಿಕಸಿತ ಭಾರತ’ ನಿರ್ಮಾಣದ ಸಂಕಲ್ಪದೊಂದಿಗೆ ದೇಶ ಮುಂದುವರಿಯುತ್ತಿದ್ದು, ಅದರಲ್ಲಿ ಯುವ ಶಕ್ತಿ ಪ್ರಮುಖ ಪಾತ್ರ ವಹಿಸಿದೆ. ಯುವಕರ ಶಕ್ತಿಯನ್ನು ಬಲಪಡಿಸುವುದು NDA ಸರ್ಕಾರದ ಪ್ರಾಧಾನ್ಯತೆಯಾಗಿದೆ ಎಂದೂ ಹೇಳಿದರು.
🔸 ಕೌಶಲ್ಯಾಭಿವೃದ್ಧಿಗೆ ಸರ್ಕಾರದ ಒತ್ತು
ಸ್ಟೀಲ್ ಇಂಡಿಯಾ ಮಿಷನ್‌ನಂತಹ ಅಭಿಯಾನಗಳು ಯುವಕರಿಗೆ ಕೌಶಲ್ಯ ತರಬೇತಿ ನೀಡುತ್ತಿವೆ. ರಾಷ್ಟ್ರೀಯ ಕರಿಯರ್ ಸರ್ವಿಸ್ ಪ್ಲಾಟ್‌ಫಾರ್ಮ್ ಮುಖಾಂತರ ಈಗಾಗಲೇ 7 ಕೋಟಿಗೂ ಹೆಚ್ಚು ಉದ್ಯೋಗಾವಕಾಶಗಳ ಮಾಹಿತಿಯನ್ನು ಹಂಚಲಾಗಿದೆ. ಪ್ರತಿಭಾ ಸೇತು ಪೋರ್ಟಲ್ ಯುವಕರಿಗೆ ಮತ್ತೊಂದು ದೊಡ್ಡ ಅವಕಾಶವಾಗಿದೆ ಎಂದು ಮೋದಿ ಹೇಳಿದರು.

